ಸಮಗ್ರತೆ ಕಾಯ್ದುಕೊಳ್ಳಿ: ಚಿದಾನಂದ
ಅರಕಲಗೂಡು: ದೇಶದ ಏಕತೆ ಮತ್ತು ಸಮಗ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನೂ ತನ್ನ ಕರ್ತವ್ಯಗಳನ್ನು ಮರೆಯದೇ ನಡೆದುಕೊಳ್ಳಬೇಕು ಎಂದು ತಾಲೂಕು ತಹಸೀಲ್ದಾರ್ ಚಿದಾನಂದ ತಿಳಿಸಿದ್ದಾರೆ.
65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶವನ್ನು ಕಾಡುತ್ತಿರುವ ಹಲವು ಸಾಮಾಜಿಕ ಪಿಡುಗು ತೊಡೆದು ಹಾಕುವ ಜತೆಗೆ ನೆರೆ ದೇಶಗಳ ಕುಚೇಷ್ಟೆಗಳನ್ನು ತಡೆಗಟ್ಟುವ ಜತೆಗೆ ದೇಶವನ್ನು ಕಾಡುತ್ತಿರುವ ಭಯೋತ್ಪಾದಕತೆ ಬೇರು ಸಹಿತ ಕಿತ್ತೊಗೆಯಲು ಪಣ ತೊಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಮಂಜು ಮಾತನಾಡಿದರು. ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಪಪಂ ಸದಸ್ಯರು,ಪಪಂ ಮುಖ್ಯಾಧಿಕಾರಿ ಸುರೇಶ್ ಬಾಬು, ಪಪಂ ಎಂಜಿನಿಯರ್ ಕವಿತ, ತಹಸೀಲ್ದಾರ್ ಗ್ರೇಡ್-2 ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪ್ರೇಮಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬೈರೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಗಣೇಶ್, ಮುಖಂಡರುಗಳಾದ ಮಧು, ನಿರಂಜನ ಸೇರಿದಂತೆ ಇತರರು ಇದ್ದರು.