ಸರ್ವರೂ ಸಮಾನತೆಯಿಂದ ಬಾಳೋಣ
ಆಲೂರು: ಬ್ರಿಟಿಷರಿಂದ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದರೂ ನಮ್ಮದೇ ಆದ ಸಂವಿಧಾನವನ್ನು 1950ರಲ್ಲಿ ಒಂದು ಕರಡು ಸಮಿತಿ ನೇಮಿಸಿ ಜಾರಿಗೊಳಿಸಲಾಯಿತು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 65ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್ ಎನ್.ಕೆ.ಶಾರದಾಂಬ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಇಲಾಖೆಯವರಿಂದ ಆಕರ್ಷಕ ಪೆರೇಡ್ ಹಾಗೂ ಪಟ್ಟಣದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾನಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಿವೃತ್ತ ಹಿರಿಯ ಆರೋಗ್ಯ ಸಹಾಯಕ ಎಚ್.ಎಸ್.ವೆಂಕಟೇಶ್, ವಿ.ಪಿ.ಹೆಗಡೆ, ಆಶಾ ಕಾರ್ಯಕರ್ತೆ ಸವಿತಾ, ವಾಸುದೇವ್, ಶಿಕ್ಷಕಿ ಮೈಮುನಾ, ಶಿಕ್ಷಕಿ ಎಲಿಜಬತ್, ರಂಗಸ್ವಾಮಿ ಹಾಗೂ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಯಶೋದಾ ಹರೀಶ್, ಉಪಾಧ್ಯಕ್ಷೆ ನಾಗಮ್ಮ, ಇಒ ಚಂದ್ರಶೇಖರ್, ಬಿಇಒ ಎಚ್.ಕೆ. ಪುಷ್ಪಲತಾ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಡಾ. ಜಯರಾಜ್, ಹಳೇ ಆಲೂರು ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಲಾಂ ಸತ್ತಾರ್ ಇದ್ದರು.