ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಾರುಕೀರ್ತಿ ಭೇಟಿ ಮಾಡಿದ ಸುಧೀರ್ ಜೈನ್

Rashmi Kasaragodu
Updated On : 28 Jan 2014, 12:40 pm

ಚನ್ನರಾಯಪಟ್ಟಣ: ಅಖಿಲ ಭಾರತ ದಿಗಂಬರ ಜೈನ ಕ್ಷೇತ್ರ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುಧೀರ್ ಜೈನ್ ಅವರು ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಕ್ಷೇತ್ರ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಆಶೀರ್ವಚನ ಪಡೆದರು.
ಸುಧೀರ್ ಜೈನ್ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಕ್ಷೇತ್ರದ ವಿದ್ಯಾನಂದ ನಿಲಯದ ಬಳಿಯಿಂದ ವಿವಿದ ವಾದ್ಯಗೋಷ್ಠಿ ಪೂರ್ಣಕುಂಭ ಹಾಗೂ ಆರತಿ ಎತ್ತುವ ಮುಖೇನ ಮೆರವಣಿಗೆಯಲ್ಲಿ ಶ್ರೀ ಮಠದವರೆಗೆ ತೆರೆದ ವಾಹನದಲ್ಲಿ ಬರಮಾಡಿಕೊಂಡರು. ನಂತರದಲ್ಲಿ ಶ್ರೀ ಕ್ಷೇತ್ರದಲ್ಲಿನ ಜಿನಾಲಯಗಳಿಗೆ ಪೂಜೆ ಸಲ್ಲಿಸಿದ ನಂತರ ಅವರಿಗೆ ಚಾವಂಡರಾಯ ವೇದಿಕೆಯಲ್ಲಿ ಶ್ರೀ ಮಠ ಹಾಗೂ ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಜೈನ ಸಂಘಟನೆಗಳ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿದರು.
ಸುಧೀರ್ ಜೈನ್ ಅವರಿಗೆ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿ ಸಮಾಜದಲ್ಲಿ ಸಾಮಾಜಿಕ ಸೇವೆ, ಧರ್ಮ ಕಲ್ಯಾಣ, ಆತ್ಮ ಕಲ್ಯಾಣವಾಗಬೇಕು. ಇಂತಹ ಜವಾಬ್ದಾರಿಯನ್ನು ಸಮಾಜದಲ್ಲಿನ ಜನತೆ ಮಾಡುವತ್ತಾ ಮುಂದಾಗಬೇಕು ಎಂದು ತಿಳಿಸಿದರು.
ಜನತೆ ತಮ್ಮ ದುಡಿಮೆಯ ಜತೆಗೆ ಧಾರ್ಮಿಕ ಕಾರ್ಯಗಳು ಸಮಾಜ ಸೇವೆಯತ್ತಾ ಮನಸ್ಸನ್ನು ಹರಿಸಿದರೆ ಅವರು ಜೀವನದಲ್ಲಿ ಸಂಪಾದಿಸಿದ್ದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಆಶಯ: ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಸ್ವಾರ್ಥ ಸಾಧನೆಗಾಗಿ ಮುಂದಾಗುತ್ತಿರುವುದರಿಂದ ಸಮಾಜ ಸೇವಕರು ಕಡಿಮೆಯಾಗುತ್ತಿದ್ದು, ಮನುಷ್ಯ ತನ್ನ ಇಳಿ ವಯಸ್ಸಿನಲ್ಲಾದರೂ ಸಾಮಾಜಿಕ ಸೇವೆ ಮಾಡುವತ್ತಾ ಚಿಂತನೆ ನಡೆಸಬೇಕು ಎಂದು ತಿಳಿಸಿದರು. ತೀರ್ಥ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳನ್ನು ಉಳಿಸಿ ಜೀರ್ಣೋದ್ದಾರದ ಕಾರ್ಯದ ಜವಬ್ದಾರಿ ಹೊತ್ತಿರುವ ಸುಧೀರ್ ಜೈನ್ ತಮ್ಮ ಸೇವಾವಧಿಯಲ್ಲಿ ಉತ್ತಮ ಕಾರ್ಯ ಮಾಡಲೆಂದು ಆಶಿಸಿದರು.
ಜೈನ ತೀರ್ಥಕ್ಷೇತ್ರದ ನವ ನಿರ್ಮಾಣ ಮತ್ತು ಜೀರ್ಣೋದ್ದಾರ ಸಮಿತಿಯ ಸಂಜಯ್ ಜೈನ್, ರಾಜ್ಯಾಧ್ಯಕ್ಷ ಡಿ.ಆರ್. ಶಹಾ, ಕಾರ್ಯದರ್ಶಿ ವಿನೋದ್ ಬಾಕ್ಲಿವಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement