ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲ ರಾಷ್ಟ್ರ
ಬೇಲೂರು: ದೇಶದಲ್ಲಿ ವಿಭಿನ್ನ ಸಂಸ್ಕೃತಿ ಭಾಷೆ ಹೊಂದಿರುವ ಭಾರತ ಜಾಗತೀಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ತಿಳಿಸಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಯೋಜಿಸಿದ್ದ ಸಾಮೂಯಿಕ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದ ಬಗ್ಗೆ ಸಮಾಜದಲ್ಲಿ ಅಸಕ್ತಿ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಸಾಮೂಹಿಕ ಗಾಯನದಲ್ಲಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ಇದರ ಮೂಲಕ ಸಂಗಿತ ಸಾಹಿತ್ಯದ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಸಬ್ ಇನ್ಸ್ಬೆಕ್ಟರ್ ಅಶ್ವಿನ್ ಕುಮಾರ್ ಮಾತನಾಡಿ, ಪ್ರಸ್ತುತ ದೇಶಾಭಿಮಾನ ಕಡಿಮೆಯಾಗುತ್ತಿದ್ದು ಸ್ವಾರ್ಥ ಜೀವನದ ಕಲ್ವನೆಯಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಏರುಪೇರಿನಿಂದಾಗಿ ದೇಶಭಕ್ತಿ ಕಡಿಮೆಯಗುತ್ತಿದೆ ಎಂದ ಅವರು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ನಾಡು- ನುಡಿ, ಸಂಸ್ಕೃತಿ ಬಗ್ಗೆ ತಿಳಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ.ಟಿ.ಇಂದಿರಾ, ಹೇಮಾವತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಅನಂತು, ವೈದ್ಯಾಧಿಕಾರಿಗಳಾದ ನರಸೇಗೌಡ, ಚಂದ್ರಮೌಳಿ, ಶ್ರೀವತ್ಸ ಎಸ್.ವಟಿ, ಕೆ.ಎನ್. ಚಂದ್ರಶೇಖರ್, ಫಾದರ್ ಸುರೇಶ್ ಸಲ್ದಾನಾ ಇತರರು ಇದ್ದರು.