ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೇತಾಜಿ ಚಿಂತನೆ ಇಂದಿಗೂ ಪ್ರಸ್ತುತ: ಮಂಜಯ್ಯ

Rashmi Kasaragodu
Updated On : 28 Jan 2014, 12:34 pm

ಆಲೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 117ನೇ ಜನ್ಮ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಡಿ.ಕೆ.ಮಂಜಯ್ಯ ಮಾತನಾಡಿ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿಯವರು ತಮ್ಮದೇ ಆದ ರೀತಿಯಲ್ಲಿ ಹೋರಾಟ ನಡೆಸಿ ವೀರ ಮರಣವನ್ನಪ್ಪಿದ ಮಹಾನ್ ನಾಯಕರಲ್ಲೊಬ್ಬರು ಎಂದರು.
ಭಾರತವನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವ ಉದ್ದೇಶಕ್ಕಾಗಿ ನೆರೆಯ ರಾಷ್ಟ್ರದ ಬೆಂಬಲ ಪಡೆದು ವಿದೇಶಿ ನೆಲದಲ್ಲಿ 'ಆಜಾದ್ ಹಿಂದ್' ಸ್ಥಾಪಿಸಿ ಸೈನಿಕರಿಗೆ ತರಬೇತಿ ನೀಡಿ ಯುದ್ಧಕ್ಕೆ ಸನ್ನದ್ಧಗೊಳಿಸಿದರು. ಅವರು ಕೊಟ್ಟ ಸಂದೇಶ ಪ್ರತಿಯೊಬ್ಬ ಭಾರತೀಯ ಸೆಟೆದು ನಿಲ್ಲುವಂತೆ ಮಾಡಿತ್ತು  ಎಂದರು.  
ಕಸಾಪ ತಾಲೂಕು ಅಧ್ಯಕ್ಷ ಗುಲಾಂಸತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಎ.ಟಿ.ಮಲ್ಲೇಶ್ ಅವರು ಸುಭಾಷ್ಚಂದ್ರ ಬೋಸ್ರ ಕ್ರಾಂತಿಕಾರಿ ಹೋರಾಟ ಚಿಂತನೆಗಳು ಇಂದಿನ ಯುವಜನತೆಗೆ ದಾರಿದೀಪವಾಗಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement