ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆಗಳ ಸೆರೆಗೆ ಸದನದಲ್ಲಿ ಒತ್ತಾಯ

Mainashree
Updated On : 28 Jan 2014, 10:02 am

ಆಲೂರು: ಕಾಡಾನೆ ಹಿಡಿಯುವ ಕಾರ್ಯಾಚರಣೆ ವಿಳಂಬವಾಗುತ್ತಿರುವ ಬಗ್ಗೆ ಹಾಗೂ ಸಕಲೇಶಪುರ, ಆಲೂರು ತಾಲೂಕು ಸೇರಿದಂತೆ ಕ್ಷೇತ್ರದಾದ್ಯಂತ ಕಳೆದ 15 ದಿನಗಳಿಂದ ಆನೆ ಹಾವಳಿ ವಿಪರೀತಗೊಂಡಿದ್ದು, ಅಪಾರ ಪ್ರಮಾಣ ಬೆಳೆ ನಷ್ಟ ಉಂಟಾಗಿರುವ ಸಂಬಂಧವಾಗಿ ಶೀಘ್ರ ಕಾರ್ಯಾಚರಣೆ ಪ್ರಾರಂಭಿಸುವಂತೆ ಒತ್ತಾಯಿಸಿ ಮಂಗಳವಾರ ಸದನದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿ ಅವರು, ದೊಡ್ಡಬೆಟ್ಟ, ಕರಡಿಬೆಟ್ಟ ಹಾಗೂ ರಂಗನಬೆಟ್ಟ ಅರಣ್ಯ ಪ್ರದೇಶ ಹಾಗೂ ಕೊಡಗಿನ ಉಂಬಳಿಬೆಟ್ಟ ಸೇರಿದಂತೆ ಸಕಲೇಶಪುರದ ಕೆರೋಡಿ, ಯಸಳೂರು ಸುತ್ತಮುತ್ತಲ ಪ್ರದೇಶದಲ್ಲಿ ಪುನಃ ಕಾಡಾನೆ ದಾಳಿ ವಿಪರೀತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಷ್ಟೇ ಅಲ್ಲದೆ ಒಂಟಿ ಸಲಗಗಳು ಹಗಲಿನಮೊತ್ತಿನಲ್ಲೇ ಗ್ರಾಮಸ್ಥರಿಗೆ ಎದುರಾಗುತ್ತಿದ್ದು, ಭಯದಿಂದಾಗಿ ಗ್ರಾಮಸ್ಥರು ತೋಟಗದ್ದೆಗಳಿಗೆ ಹೋಗಲು ಹಿಂಜರಿಯುತ್ತಿದ್ದರೆ, ಶಾಲೆಗೆ ಹೋಗಲಾರದೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿಯುವಂತಾಗಿದೆ.
ಕಳೆದ ಬಾರಿ ಕಾಡಾನೆ ಹಿಡಿದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕ್ಯಾಂಪ್ ತೆರವುಗೊಳಿಸದೆ ಇತರೆ ಕಾಡಾನೆ ಹಿಡಿಯಲು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದ್ದ ಅರಣ್ಯ ಸಚಿವರಿಗೆ ಈಗಾಗಲೇ ಕ್ಯಾಂಪ್ ತೆರವುಗೊಳಿಸುವರ ಬಗ್ಗೆ ಗಮನ ಸೆಳೆದ ಶಾಸಕರು ಶೀಘ್ರ ಕಾಡಾನೆ ಸೆರೆ ಹಿಡಿಯುವಂತೆ ಶಾಸಕರು ಒತ್ತಾಯಿಸಿದರು.
ಸಚಿವರ ಭರವಸೆ: ಈ ಬಗ್ಗೆ ಅರಣ್ಯ ಸಚಿವ ರಮನಾಥ ರೈ ಪ್ರತಿಕ್ರಿಯಿಸಿದ ಅವರು, ಗುರುವಾರದಂದು ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಫೆ. 5ರಿಂದ ಎಲ್ಲಾ ಆನೆಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement