'ರಸ್ತೆ ಸಂಚಾರ ಗಂಭೀರ ಸಮಸ್ಯೆ'
ಬೇಲೂರು: ರಸ್ತೆ ಸಂಚಾರ ಎಂಬುದು ದೇಶಕ್ಕೆ ಗಂಭೀರವಾದ ಸಮಸ್ಯೆಯಾಗಿದ್ದು, ಒಂದು ಸಣ್ಣ ತಪ್ಪಿನಿಂದಾಗಿ ಆಗುವ ಅಪಘಾತಗಳು ದೊಡ್ಡ ದುತಂತಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸಕಲೇಶಪುರ ಸಹಾಯಕ ಪ್ರಾದೇಶಿಕ ಅಧಿಕಾರಿ ಡಾ.ಕೇಶವ ಧರಣಿ ತಿಳಿಸಿದರು.
ಪಟ್ಟಣದ ಶಾಂತಳ ಕಾಲೇಜು ಮತ್ತು ಸಾರಿಗೆ ಇಲಾಖೆ, ಸಕಲೇಶಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಆಶ್ರಯದಲ್ಲಿ ಪಟ್ಟಣದ ಶಾಂತಳ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಅತ್ಯಂತ ಕಡಿಮೆ ವಾಹನಗಳಿರುವ ಭಾರತದಲ್ಲಿ ಅತ್ಯಂತ ಹೆಚ್ಚು ಜನರು ಅಪಘಾತಗಳಲ್ಲಿ ಸಾವನ್ನಪ್ಪುತಿದ್ದಾರೆ ಎಂದರು.