ಸುದ್ದಿ ಸಂಕ್ಷೇಪ
ಇಂದು ಜಾನಪದ ಗೀತಗಾಯನ
ಆಲೂರು: ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಸನ ಹಾಗೂ ಕಣತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜ.29ರಂದು ಬೆಳಗ್ಗೆ 10ಕ್ಕೆ ಕಾಲೇಜು ಆವರಣದಲ್ಲಿ ಸ್ಥಳೀಯ ಜಾನಪದ ಗಾಯನ ಕಾರ್ಯಕ್ರಮದಡಿಯಲ್ಲಿ ಆಲೂರಿನ ಶಿವಶಂಕರಮ್ಮ ಮತ್ತು ತಂಡದಿಂದ ಹಾಡಿರಿ ರಾಗಗಳ ಎಂಬ ಜಾನಪದ ಗೀತಗಾಯ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಜಗದೀಶ್ ಉದ್ಘಾಟಿಸುವರು. ಕಣತೂರು ಗ್ರಾಪಂ ಅಧ್ಯಕ್ಷ ನಟರಾಜ ನಾಕಲಗೂಡು ಅಧ್ಯಕ್ಷತೆ ವಹಿಸುವರು. ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಜಾನಪದ ಒಂದು ವಿವೇಚನೆ ಎಂಬ ಉಪನ್ಯಾಸ ನೀಡಲಿದ್ದು, ಆಲೂರು ನಾಗರಾಜಜ್ಪ್ರಾಸ್ತಾವಿಕವಾಗಿ ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಡಿ.ಎಂ. ವರದರಾಜ್, ಟಿ.ಪಿ. ನಾಗರಾಜ್, ಪರಾಶರಮೂರ್ತಿ, ಸಿ.ಆರ್.ಪಿ. ಕುಮಾರ್ ಭಾಗವಹಿಸುವರು.
ಫೆ. 2ರಂದು ಮನೆಮನೆ ಕವಿಗೋಷ್ಠಿ
ಹಾಸನ: ಲೇಖಕಿ ಸುಶೀಲಾ ಸೋಮಶೇಖರ್ ಪ್ರಾಯೋಜಕತ್ವದಲ್ಲಿ ಸಾಲಗಾಮೆ ರಸ್ತೆಯ ಪ್ರೆಸಿಡೆನ್ಸಿ ಕಾಲೇಜಿನ ಹಿಂಭಾಗದಲ್ಲಿರುವ ಚೈತ್ರೋದಯ ನಿಲಯದಲ್ಲಿ ಫೆ. 2ರಂದು ಸಂಜೆ 4.30ಕ್ಕೆ 203ನೇ ಮನೆಮನೆ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಗೋಷ್ಠಿಯಲ್ಲಿ ಚುಟುಕು ಸಾಹಿತ್ಯದಲ್ಲಿ ವೈಚಾರಿಕತೆ ಎಂಬ ವಿಷಯದಡಿ ಸಾಹಿತಿ ಗೊರೂರು ಶಿವೇಶ್ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ಹಿರಿ- ಕಿರಿಯ ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9483470794, 9448997084 ಸಂಪರ್ಕಿಸಬಹುದು.
ಇಂದು ಪ್ರಗತಿ ಪರಿಶೀಲನಾ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಜ. 29ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ 2013-14ನೇ ಸಾಲಿನ ಡಿಸೆಂಬರ್ ಅಂತ್ಯಗೊಂಡಂತೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
'ಮಧುಮೇಹ ನಿಯಂತ್ರಿಸಿದಲ್ಲಿ ಸುಖ ಜೀವನ'
ಹಾಸನ: ಮಧುಮೇಹ ಖಾಯಿಲೆಯ ಬಗ್ಗೆ ಆತಂಕ ಪಡುವುದಕ್ಕಿಂತ ಅದರ ನಿಯಂತ್ರಣದ ಮೂಲಕ ಸುಖ ಜೀವನ ನಡೆಸಬಹುದು ಅದಕ್ಕೆ ವೈದ್ಯರ ಸಲಹೆಯನ್ನು ಸಮಗ್ರವಾಗಿ ಪಾಲಿಸಬೇಕು ಎಂದು ವೈದ್ಯ ಹಾಗೂ ಸಮಾಜ ಸೇವಕ ಡಾ. ಗುರುರಾಜ್ ಹೆಬ್ಬಾರ್ ತಿಳಿಸಿದರು.
ನಗರದ ಪ್ರಿಯದರ್ಶಿನಿ ಆರೋಗ್ಯಧಾಮದಲ್ಲಿ ಶ್ರೀಗಂಧ ಸೇವಾಸಂಸ್ಥೆ ಹಾಗೂ ಪ್ರಿಯದರ್ಶಿನಿ ಆರೋಗ್ಯಧಾಮ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಧುಮೇಹ (ಸಕ್ಕರೆ ಖಾಯಿಲೆ) ಕುರಿತು ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಿಯದರ್ಶಿನಿ ಆರೋಗ್ಯಧಾಮದ ಡಾ.ಈ. ಎಸ್. ಪರಮೇಶ್ ಮಾತನಾಡಿ, ಹಲವು ವಿಧಾನಗಳಿಂದ ಮಧುಮೇಹ ರೋಗವನ್ನು ದೂರ ಇಡಬಹುದು ಎಂದರು. ಹಿರಿಯ ನಾಗರಿಕ ಹಾಗೂ ನಿವೃತ್ತ ಶಿಕ್ಷಕ ಚಂದ್ರಶೇಖರ್ ಉದ್ಘಾಟಿಸಿದರು. ಸತ್ಯಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ದರ್ಶನ್ ಬಾಬು, ಶ್ರೀಗಂಧ ಸೇವಾಸಂಸ್ಥೆ ಗೌರವಾಧ್ಯಕ್ಷ ಹೆಚ್.ಆರ್. ಹರೀಶ್ ಕೋಟೆ, ಅಧ್ಯಕ್ಷ ಎಸ್.ಡಿ. ರಂಗಸ್ವಾಮಿ ಮಾತನಾಡಿದರು. ನಿರ್ದೇಶಕ ಎಸ್.ಸಿ. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಬರಹಗಾರ ಹರೀಶ್ ಕಟ್ಟೆಬೆಳಗುಲಿ, ಸಮಾಜ ಸೇವಕಿ ರೋಜಾ, ಕಾರ್ಯದರ್ಶಿ ಎನ್.ಸಿ. ಗಜೇಂದ್ರ, ಖಜಾಂಚಿ ಎಸ್.ಎಸ್. ರಂಗಸ್ವಾಮಿ ಹಾಗೂ ನಿರ್ದೇಶಕರಾದ ಕುಶಾಲ್, ಬಿಪಿನ್ ತುರತಾಲೆ, ವರದರಾಜ್, ರಂಗನಾಥ್ ತರೀಕೆರೆ, ಜಯಪಾಲ್ ಹಾಗೂ ಉಪಾಧ್ಯಕ್ಷ ರಾಜು ಇದ್ದರು.