ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಟುವಟಿಕೆಯಿಂದ ಆರೋಗ್ಯ ವೃದ್ಧಿ:ನಾರಾಯಣಶೆಟ್ಟಿ

Rashmi Kasaragodu
Updated On : 30 Jan 2014, 1:24 am

ಹಾಸನ: ನಗರದ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ಪದವಿ ವಿಭಾಗದ ವತಿಯಿಂದ ಇತ್ತೀಚೆಗೆ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಪಾರಿವಾಳ ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಸರ್ಕಾರಿ ಮಹಿಳಾ ಪದವಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಚ್. ನಾರಾಯಣ ಶೆಟ್ಟಿ ಅವರು ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳ ಸಂಬಂಧದ ಮಹತ್ವದೊಂದಿಗೆ ಆರೋಗ್ಯವೇ ಭಾಗ್ಯ ಎಂಬುದರ ಬಗ್ಗೆ ತಿಳಿಸಿದರು. ವಿಶ್ವವಿದ್ಯಾನಿಲಯ ಮಟ್ಟದ 100 ಮೀ. ಓಟಗಾರ್ತಿ ಫೆಲ್ಸಿ ಕ್ರಿಸಿಲ್ ಪಿಂಟೋ ಕ್ರೀಡಾಜ್ಯೋತಿ ಬೆಳಗಿದರು. ಕ್ರೀಡಾ ಕಾರ್ಯದರ್ಶಿ ಶುಭ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಕೆ.ಎಚ್. ನಾರಾಯಣ ಶೆಟ್ಟಿ, ಸಂಸ್ಧೆಯ ಸಂಚಾಲಕಿ ಮರ್ಸಿಲಿನ್ ವೀಜಸ್ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲೆ ಜಾಸ್ಮಿನ್ ಇದ್ದರು. ಪಥಸಂಚಲನೆ ಆಕರ್ಷಕವಾಗಿತ್ತು.
ಅಧ್ಯಕ್ಷೆ ಅರ್ಚನ, ಉಪಾಧ್ಯಕ್ಷೆ ಕೀರ್ತನ ಅವರು ಸಾರಥ್ಯದಲ್ಲಿ 10 ತಂಡಗಳು  ಕ್ರೀಡಾಕೂಟದಲ್ಲಿ  ಪಾಲ್ಗೊಂಡಿದ್ದವು. ಅಂತಿಮ ಹಣಾಹಣಿಯ ವಾಲಿಬಾಲ್, ಥ್ರೋಬಾಲ್, ಖೋಖೋ, ಕಬ್ಬಡಿ ಪಂದ್ಯಗಳು ರೋಚಕವಾಗಿ ಮೂಡಿಬಂದವು. ಕಾಲೇಜು ಸಿಬ್ಬಂದಿ ವರ್ಗದಿಂದ ಆಯೋಜನೆ ಮತ್ತು ನಿರೂಪಿಸಿದರು. ಉಪನ್ಯಾಸಕರ ರೋಚಕ ಸ್ನೇಹಪರ ವಾಲಿಬಾಲ್ ಪಂದ್ಯಾವಳಿ ಮನರಂಜನೆಗಾಗಿ ನಡೆದ ಈ ಪಂದ್ಯ ಮೈನವಿರೇಳಿಸುವಂತಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement