ಚನ್ನರಾಯಪಟ್ಟಣ ತಾಲೂಕಲ್ಲೇ ಹೆಚ್ಚು ಹಾಲು ಸಹಕಾರ ಸಂಘಗಳು'
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನಲ್ಲಿ 276 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ರಾಜ್ಯದಲ್ಲೇ ಹೆಚ್ಚು ಸಂಘ ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆ ಇದ್ದು, ರೈತರಿಗೆ ಹಾಲಿನಿಂದ ತಿಂಗಳಿಗೆ ರು. 8 ಕೋಟಿ ಸಿಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಅವರು ಇಲ್ಲಿಗೆ ಸಮೀಪದ ರಂಗನಾಥಪುರದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಾಕಾರ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, 123 ಹಾಲು ಉತ್ಪಾದಕರ ಮಹಿಳಾ ಸಹಾಕಾರ ಸಂಘಗಳಿವೆ ಎನ್.ಡಿ.ಪಿ ಸ್ಟೆಪ್ ಯೋಜನೆಯಿಂದ ಮಹಿಳಾ ಸಹಾಕಾರ ಸಂಘಗಳಿಗೆ ಹೆಚ್ಚು ಅನುಕೂಲಗಳಿವೆ ತರಬೇತಿ ಪಡೆದುಕೊಳ್ಳಲು ತಿಳಿಸಿದರು. ಅಕ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ರು. 6.35 ಕೋಟಿ ಸಾಲ ನೀಡಿದ್ದು, ಇದರಲ್ಲಿ ರು. 2 ಕೋಟಿ ರೈತರ ಸಾಲ ಮನ್ನಾ ಆಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ಹೆಚ್.ಜಿ ರಾಮಣ್ಣ, ಪುಟ್ಟರಾಜು, ಪ್ರಭಾರ ವ್ಯವಸ್ಥಾಪಕ ಹೆಚ್.ಟಿ. ನಂಜೇಗೌಡ, ವಿಸ್ತರಣಾಧಿಕಾರಿ ತಿಮ್ಮೇಗೌಡ, ಗೋಪಾಲಗೌಡ, ಎನ್.ಆರ್. ತಾತೇಗೌಡ, ಸಂಘದ ಅಧ್ಯಕ್ಷೆ ಗೀತಾ ರವಿಕುಮಾರ್, ಕಾರ್ಯದರ್ಶಿ ಪ್ರಭಾಶಂಕರೇಗೌಡ, ಜೆಡಿಎಸ್ ಮುಖಂಡ ಎಂ.ಆರ್. ವಾಸು ಇದ್ದರು.