ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಹಾಸನ: ಹಾಸನ- ಅರಕಲಗೂಡು ವಿದ್ಯುತ್ ಮಾರ್ಗದಲ್ಲಿ ಗೋಪುರ ನಿರ್ಮಾಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ. 31ರಂದು ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಅರಕಲಗೂಡು ವಿದ್ಯುತ್ ವಿತರಣಾ ಕೇಂದ್ರ, ದೊಡ್ಡಮಗ್ಗೆ ವಿದ್ಯುತ್ ವಿತರಣಾ ಕೇಂದ್ರ, ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಕೇಂದ್ರ, ಶನಿವಾರಸಂತೆ ವಿದ್ಯುತ್ ವಿತರಣಾ ಕೇಂದ್ರ, ಯಸಳೂರು ವಿದ್ಯುತ್ ವಿತರಣಾ ಕೇಂದ್ರ ಮೇಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕೆಪಿಟಿಸಿಎಲ್ ಎಂಜಿನಿಯರ್ ಕೋರಿದ್ದಾರೆ.