ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಕ್ಕಳು ಕ್ರೀಡಾಪಟುಗಳಾಗಲು ಪ್ರೋತ್ಸಾಹಿಸಬೇಕು

Rashmi Kasaragodu
Updated On : 30 Jan 2014, 1:26 am

ಚನ್ನರಾಯಪಟ್ಟಣ: ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳಾಗಿ ಮಾಡುವಲ್ಲಿ ಪ್ರೋತ್ಸಾಹ ನೀಡಲು ಸದಾ ಮುಂದಾಗಬೇಕು ಎಂದು ಅಂತಾರಾಷ್ಟ್ರೀಯ ವೇಯ್ಟ್ ಲಿಫ್ಟರ್ ರೇಶ್ಮಾ ತಿಳಿಸಿದರು
ಪಟ್ಟಣದ ಜ್ಞಾನಸಾಗರ ವಿದ್ಯಾ ಸಂಸ್ಥೆ ಏರ್ಪಡಿಸಿದ್ದ ಕಲೆ ಮತ್ತು ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಕ್ರೀಡಾ ಮನೋಭಾವ ಮೂಡಿಸಿದಾಗ ಮಾತ್ರ ಉತ್ತಮ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ತಿಳಿಸಿದರು.
ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರ ದೇಹ ಮತ್ತು ಮನಸ್ಸಿನಲ್ಲಿ ಉಲ್ಲಾಸ ತುಂಬಿ  ಏಕಾಗ್ರತೆ ಹೆಚ್ಚುವುದರಿಂದ ಸುಲಭವಾಗಿ ಪಠ್ಯಗಳು ಅರ್ಥವಾಗುತ್ತವೆ. ಅಂತಹ ಸನ್ನಿವೇಶವನ್ನು ಪೋಷಕರು ಮರೆತು ತಮ್ಮ ಮಕ್ಕಳನ್ನು ಯಾವಾಗಲೂ ಓದುವಂತೆ ಪ್ರೇರೇಪಿಸುತ್ತಾರೆ.
ಸಾಧನೆಗೆ ಮುಂದಾಗಬೇಕು: ಏಕಗ್ರತೆಯಿಲ್ಲದ ಮನಸ್ಸಿಗೆ ಒಂದಲ್ಲಾ ಹತ್ತು ಬಾರಿ ಓದಿದರೂ ವಿಷಯ ಅರ್ಥವಾಗುವುದಿಲ್ಲ.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಸಾಧನೆಗೈದವರನ್ನು ಸಮಾಜ ಗುರುತಿಸುತ್ತದೆ.
ಅದರಂತೆ, ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮೀಸಲಾತಿ ದೊರೆಯುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಭಾಗವಹಿಸಿ, ಉತ್ತಮ ಸಾಧನೆಗೆ ಮುಂದಾಗಬೇಕು ಎಂದು ತಿಳಿಸಿದರು.
ಶಿಕ್ಷಕರ ಪ್ರೋತ್ಸಾಹ ಬೇಕು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ ಮಾತನಾಡಿ, ಇಂದು ನಾವು ವೈಜ್ಞಾನಿಕವಾಗಿ ಸಾಧನೆ ಮಾಡುವುದು ಒಂದು ಸವಾಲಾಗಿದ್ದು, ಬಾಲ್ಯದಿಂದಲೇ ವೈಜ್ಞಾನಿಕವಾಗಿ ಸಾಧನೆ ಮಾಡುವ ಯತ್ನಕ್ಕೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಿದರೆ ಮುಂದಿನ ದಿನಗಳಲ್ಲಿ ಆತ ಬಾಲವಿಜ್ಞಾನಿಯಾಗಿ ಪರಿಚಯಿಸುತ್ತಾನೆ ಎಂದರು.
ಮುಂದುವರಿದ ರಾಷ್ಟ್ರ ಅಮೇರಿಕಾದ ನಾಸಾದಲ್ಲಿ ಶೇ.16ರಷ್ಟು ಮಂದಿ ಭಾರತೀಯ ವಿಜ್ಞಾನಿಗಳಿರುವ ಬಗ್ಗೆ ಮಾಹಿತಿಯಿದ್ದು, ವೈಜ್ಞಾನಿಕವಾಗಿ ತಮ್ಮ ದೇಶ ಮುಂದಿದೆ.
ಆದರೆ ತಮ್ಮ ದೇಶದಲ್ಲಿ ವಿಜ್ಞಾನಿಗಳ ಸಾಧನೆಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ್, ಕಾರ್ಯದರ್ಶಿ ಭಾರತಿ ನಾಗೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement