ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ

Rashmi Kasaragodu
Updated On : 30 Jan 2014, 1:24 am

ಹಾಸನ: ರಾಜ್ಯದಲ್ಲಿ ಬತ್ತ, ಸಂಕರ ಬತ್ತ, ರಾಗಿ, ಸಂಕರ ಜೋಳ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಸೋಯಾಅವರೆ, ಸೂರ್ಯಕಾಂತಿ, ಗೋದಿ, ಕಡಲೆ, ಹಿಂಗಾರಿ ಜೋಳ, ಮತ್ತು ಕುಸುಬೆ, ಬಿತ್ತನೆ ಬೀಜಗಳನ್ನು ನಾನಾ ಯೋಜನೆಗಳಡಿ ಸಬ್ಸಿಡಿ ದರಗಳಲ್ಲಿ ವಿತರಿಸಲಾಗುತ್ತಿದೆ.
ರಾಜ್ಯದಲ್ಲಿ 2010-11ರಿಂದ 2012-13ರವರೆಗೆ ಬಿತ್ತನೆ ಬೀಜಗಳ ಸಬ್ಸಿಡಿಗೆ ಒಟ್ಟು ರು. 31285.47 ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 2010-11ರಿಂದ 2012-13ರವರೆಗೆ ಒಟ್ಟು 75,44,000 ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. 2013-14 ನೇ ಸಾಲಿನಲ್ಲಿ ಜ. 22, 2014ರವರೆಗೆ ಒಟ್ಟು 26,69,958 ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಿಯಾಯಿತಿ ದರ: ಸರ್ಕಾರವು ಯಾವುದೇ ಬಿತ್ತನೆ ಬೀಜಗಳನ್ನು ನೇರವಾಗಿ ಖರೀದಿಸುವುದಿಲ್ಲ. ಆದರೆ, ರಾಜ್ಯದ ರೈತರಿಗೆ ರಿಯಾತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999 ಅಡಿ ಟೆಂಡರುಗಳನ್ನು ಕರೆದು, ಈ್ಟಟಿಡ್ಝ್ಜಟಿಟಜಟಿಡಿ ಆಧಾರದ ಮೇಲೆ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಗುರುತಿಸಿದ ಮಾರಾಟ ಕೇಂದ್ರಗಳ ಮುಖಾಂತರ ಸಕಾಲದಲ್ಲಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ರಿಯಾಯಿತಿ ಯೋಜನೆಗಳಡಿ ವಿತರಿಸಲಾದ ಬಿತ್ತನೆ ಬೀಜಗಳ ಮಾರಾಟ ದರದಲ್ಲಿ ಸರಾಸರಿ ಶೇ. 20ರಷ್ಟು ಏರಿಕೆಯಾಗಿರುತ್ತದೆಂದು ಸಚಿವರು ತಿಳಿಸಿದರು.
ರೈತರಿಗೆ ಗುಣಮಟ್ಟದ ಬೀಜ ಒದಗಿಸಲು ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಅಧಿನಿಯಮ 1966 ಬೀಜ ನಿಯಮಾವಳಿ 1968 ಮತ್ತು ಬೀಜ (ನಿಯಂತ್ರಣ) ಆದೇಶ 1983 ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ. ಸದರಿ ಕಾಯಿದೆಯಡಿಯಲ್ಲಿ ಬೀಜ ಪರಿವೀಕ್ಷರುಗಳನ್ನು ನೇಮಿಸಲಾಗಿದೆ. ಪರವೀಕ್ಷರು ಪ್ರತಿ ಹಂಗಾಮಿನಲ್ಲಿ ಬಿತ್ತನೆ ಬೀಜಗಳ ಮಾದರಿಗಳನ್ನು ಸಂಗ್ರಹಿಸಿ ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸುತ್ತಾರೆ.
ಬೀಜದೋಷವಿದ್ದರೆ ಕಾನೂನು ಕ್ರಮ: ಬೀಜ ವಿಶ್ಲೇಷಣೆಯಲ್ಲಿ ಕಡಿಮೆ ಗುಣಮಟ್ಟ ಕಂಡು ಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಬೀಜ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುತ್ತದೆ. ಮುಂದುವರೆದು ರಾಜ್ಯದಲ್ಲಿ ಬೆಳೆ ಹಾನಿಯಾಗಿ ರೈತರಿಗೆ ನಷ್ಟವಾದ ಸಂದರ್ಭಗಳಲ್ಲಿ, ಅಂತಹ ತಾಲ್ಲೂಕುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ, ಕ್ಷೇತ್ರ ತಪಾಸಣೆ ನಡೆಸಿ, ವರದಿಯಲ್ಲಿ ಬೀಜದೋಷದಿಂದ ಬೆಳೆಹಾನಿ ಸಂಭವಿಸಿರುವುದು ದೃಢಪಟ್ಟಲ್ಲಿ, ಅಂತಹ ಬೀಜಗಳನ್ನು ಪೂರೈಸಿದ ಸಂಸ್ಥೆಯ ವಿರುದ್ಧ ಬೀಜ ಅಧಿನಿಯಮದಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ರೈತರಿಗೆ ಪರಿಹಾರ: ನಷ್ಟ ಹೊಂದಿದ ರೈತರಿಗೆ ಸಂಬಂಧಪಟ್ಟ ಸಂಸ್ಥೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಳಪೆ ಬೀಜದಿಂದ ಬೆಳೆ ನಷ್ಟವಾಗಿರುವ ಪ್ರಕರಣಗಳಲ್ಲಿ ರೈತರಿಗೆ ಗ್ರಾಹಕರ ವೇದಿಕೆ ಮೂಲಕ ಪರಿಹಾರ ಸಹ ಅವಕಾಶವಿದೆ ಎಂದು ರಾಜ್ಯ ಕೃಷಿ ಸಚಿವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು  ಕೇಳಿದ ಪ್ರಶ್ನೆಗೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement