ಅಂಬೇಡ್ಕರ್ ತತ್ವ ಜಾರಿಗೆ ತರುವ ನಾಯಕರಿಲ್ಲ'
ಹೊಳೆನರಸೀಪುರ: ಶೋಷಿತರು ಆಳುವ ಸಮಾಜವಾಗಿ ಪರಿವರ್ತನೆಯಾದಲ್ಲಿ ಮಾತ್ರವೇ ಈ ದೇಶದಲ್ಲಿ ಸಮಾನತೆ ಸಾಧ್ಯವಾದೀತು ಎಂದು ಕನಸು ಕಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸುಗಳು- ಸಿದ್ಧಾಂತಗಳು ಮತ್ತು ತತ್ವಗಳನ್ನು ಮುಕ್ತ ಮನಸ್ಸಿನಿಂದ ಜಾರಿಗೆ ತರುವ ನಾಯಕರು ಈ ದೇಶದಲ್ಲಿ ಇಂದಿಗೂ ಕಾಣುತ್ತಿಲ್ಲ ಎಂದು ಸರ್ವಜನ ಸಮಾಜ ವೇದಿಕೆಯ ರಾಜ್ಯಾಧ್ಯಕ್ಷ ಬಿ. ಗೋಪಾಲ್ ವಿಷಾದಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ವತಿಯಿಂದ ಪಟ್ಟಣದಲ್ಲಿ ಇತ್ತೀಚೆಗೆ 65ನೇ ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಮರುಗಿದ್ದರು: ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿನ ಇಂದಿನ ಪರಿಸ್ಥಿತಿಯನ್ನು ಕಂಡಾಗ, ಶೋಷಿತರು-ಅಸ್ಪ ೃಶ್ಯರು ಈ ದೇಶವನ್ನು ಆಳುವ ಸಮಾಜವಾಗಿ ಪರಿವರ್ತನೆಯಾಗಿ, ಈ ದೇಶವನ್ನು ಆಳುವುದನ್ನು ಕಾಣಬೇಕೆಂಬ ಹಂಬಲ ನನ್ನಲ್ಲಿತ್ತು. ಆದರೆ, ಈ ದೇಶದಲ್ಲಿ ಸಮಾನತೆ, ನ್ಯಾಯ, ನೀತಿ ಕಾಣುತ್ತಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅಂದೇ ಮರುಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಎಸ್. ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೆ.ಡಿ.ಎಸ್.ಎಸ್ನ ರಾಜ್ಯ ಸಂಚಾಲಕರಾದ ಎಂ. ಸೋಮಶೇಖರ್, ಎಚ್.ಸಿ. ಜಗದೀಶ್, ಎನ್.ಆರ್. ಶಿವರಾಮ್, ಬಿ.ಜೆ. ರಂಗೇಶ್, ಎಂ.ಜೆ. ರತ್ನಾಕರ್, ಬಿ.ಕೆ. ವೆಂಕಟೇಶ್, ಜೆ. ರಂಗಪ್ಪ, ಎಚ್.ಟಿ. ಲಕ್ಷ್ಮಣ, ರಂಗಸ್ವಾಮಿ, ಕರವೇ ತಾಲೂಕು ಅಧ್ಯಕ್ಷ ಕೆರಗೋಡು ಮಹೇಶ್ ಮೊದಲಾದವರು ವೇದಿಕೆಯಲ್ಲಿದ್ದರು.