ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಮರಳು ಸಾಗಣೆ: 7 ಜನರ ಬಂಧನ

Rashmi Kasaragodu
Updated On : 31 Jan 2014, 12:51 pm

ಹಾಸನ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 7 ಜನರ ನ್ನು ಬಂಧಿಸಿದ್ದು, 11 ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಆಲೂರು ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಸಕಲೇಶಪುರ ಕಡೆಯಿಂದ ಅಕ್ರಮವಾಗಿ ಲಾರಿಗಳಲ್ಲಿ ಮರಳು ಸಾಗಿಸುತ್ತಿದ್ದಾದ ಪೊಲೀಸರು ಆಲೂರು ತಾಲ್ಲೂಕಿನ ಬಾಚನಹಳ್ಳಿ ಕೆರೆ ಏರಿಯ ಮೇಲೆ ಲಾರಿಗಳಿಗೆ ಮರಳನ್ನು ತುಂಬಿಸಿಕೊಂಡು ನಿಂತಿದ್ದು, ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಲಾರಿಯ ಚಾಲಕರು ತಪಾಸಣೆ ನಡೆಸದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಸತೀಶ್ (22),  ಆಶೋಕ (22), ಅಲ್ತಾಫ್ (27), ಅಜಯ್ ಕುಮಾರ್ (22) ಮ್ತತು ವೆಂಕಟರಾಜು (23) ಎಂಬವರನ್ನು ಬಂಧಿಸಿದ್ದು, 9 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ನಗರ ಠಾಣೆಯ ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿದ್ದಾಗ ಸಕಲೇಶಪುರಪಟ್ಟಣದ ಬಿ.ಎಂ. ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಮಂಗಳೂರು ಕಡೆಯಿಂದ ಬಂದ 2 ಲಾರಿಗಳನ್ನು ವಶಪಡಿಸಿಕೊಂಡು ದೇವರಾಜು (36) ಮತ್ತು ಬಸವರಾಜು (27) ಎಂಬವರನ್ನು ಬಂಧಿಸಿದ್ದು,  ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement