ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು- ನಾಳೆ ನೀರು ವ್ಯತ್ಯಯ

Rashmi Kasaragodu
Updated On : 31 Jan 2014, 12:47 pm

ಹಾಸನ: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಇರುವುದರಿಂದ ಜ. 31 ಮತ್ತು ಫೆ.1ರಂದು  ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆಯ ಆಯುಕ್ತ ಕೃಷ್ಣಮೂರ್ತಿ ತಿಳಿಸಿದ್ದಾರೆ. ನಗರಕ್ಕೆ ನೀರು ಸರಬರಾಜು ಮಾಡುವ ಗೊರೂರು ನೀರು ಸರಬರಾಜು ಮಾರ್ಗದಲ್ಲಿನ ಹಾಸನ - ಅರಕಲಗೂಡು 66 ಕೆ.ವಿ ವಿದ್ಯುತ್ ಮಾರ್ಗದ ಮಧ್ಯೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ., ಹಾಸನ ವತಿಯಿಂದ 66 ಕೆ.ವಿ ವಿದ್ಯುತ್ ಗೋಪುರ ಹಾಕಲು ಉದ್ದೇಶಿಸಲಾಗಿದ್ದು ಜ. 31ರಂದು ಬೆಳಗ್ಗೆ 9.30ರಿಂದ ಸಂಜೆ 4ರವೆರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಜ.31 ಮತ್ತು ಫೆ. 1ರಂದು  ಗೊರೂರು ನೀರು ಸರಬರಾಜು ಘಟಕದಿಂದ ಹಾಸನ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗುತ್ತದೆ ಎಂದು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement