ಇಂದು ವಿದ್ಯುತ್ ವ್ಯತ್ಯಯ
ಹಾಸನ: ಹಾಸನ- ಅರಕಲಗೂಡು ವಿದ್ಯುತ್ ಮಾರ್ಗದಲ್ಲಿ ಗೋಪುರ ನಿರ್ಮಾಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜ. 31ರಂದು ಜಿಲ್ಲೆಯ ವಿವಿಧೆಡೆ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ನ್ಯಾಷನಲ್ ಟೆಕ್ಸ್ಟೈಲ್ಸ್, ಹಿಮತ್ಸಿಂಗ್ ಕಾ, ಗೊರೂರು ನೀರುಸರಬರಾಜು ಕೇಂದ್ರ, ಮಾರುತಿ ಪವರ್ ಜಂಕ್ಷನ್, ಸಮೈರ್ ಐಪಿಪಿ, ಹೇಮಾವತಿ ಎಡದಂಡೆ ನಾಲೆ, ಹೇಮಾವತಿ ಬಲದಂಡೆ ನಾಲೆ, ಅರಕಲಗೂಡು ವಿದ್ಯುತ್ ವಿತರಣಾ ಕೇಂದ್ರ,, ದೊಡ್ಡಮಗ್ಗೆ ವಿದ್ಯುತ್ ವಿತರಣಾ ಕೇಂದ್ರ, ಮಲ್ಲಿಪಟ್ಟಣ ವಿದ್ಯುತ್ ವಿತರಣಾ ಕೇಂದ್ರ, ಶನಿವಾರ ಸಂತೆ ವಿದ್ಯುತ್ ವಿತರಣಾ ಕೇಂದ್ರ, ಯಸಳೂರು ವಿದ್ಯುತ್ ವಿತರಣಾ ಕೇಂದ್ರ ಮೇಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.