ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗಾಂಧಿ ಚಿತಾಭಸ್ಮ, ಸಮಾಧಿಗೆ ಶ್ರದ್ಧಾಂಜಲಿ

Rashmi Kasaragodu
Updated On : 31 Jan 2014, 12:49 pm

ಅರಸೀಕೆರೆ: ಕಸ್ತೂರಿಬಾ ಶಿಬಿರದಲ್ಲಿರುವ ಮಹಾತ್ಮ ಗಾಂಧಿಜಿ ಚಿತಾಭಸ್ಮ ಸಮಾಧಿಗೆ ತಹಸೀಲ್ದಾರ್ ಕೇಶವಮೂರ್ತಿ ಗುರುವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಿದರು.
ರಾಷ್ಟ್ರೀಯ ಹುತಾತ್ಮರ ದಿನ ಅಂಗವಾಗಿ ಕಸ್ತೂರಿ ಬಾ ಶಿಬಿರಕ್ಕೆ ಆಗಮಿಸಿದ ಅವರು, ಗಾಂಧಿಜಿ ಭಾವಚಿತ್ರಕ್ಕೆ ಪುಷ್ಪಹಾರ ಹಾಕುವುದರ ಮೂಲಕ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಿದರು.ಈ ಸಂದರ್ಭದಲ್ಲಿ ಅನಂತ್ ಇಂಟರ್ ನ್ಯಾಷನಲ್ ಸ್ಕೂಲ್ ಮಕ್ಕಳು ಸಾಮೂಹಿಕ ಭಜನೆ ಮಾಡಿ ಸಮಾಧಿಗೆ ನಮಿಸಿದರು. ಉದ್ಯಮಿ ಅನಂತಕುಮಾರ್, ರಾಜಸ್ವ ನಂಜುಂಡಪ್ಪ, ಚಿಕ್ಕೂರು ಗ್ರಾಮ ಲೆಕ್ಕಾಧಿಕಾರಿ ಪ್ರಿಯಾಂಕ, ಮಾರುತಿ ಇದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಸಿದ್ಧಪಡಿಸಿರುವ ಗಾಂಧಿಜಿಯವರ ಬೃಹತ್ ಪುತ್ಥಳಿಯನ್ನು ಗಾಂಧೀಜಿ ಸಮಾಧಿ ಬಳಿ ಪ್ರತಿಷ್ಠಾಪಿಸಲು ನಿರ್ಧರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement