ಮನೆ ನೀಡುವಂತೆ ಗುಡಿಸಲು ವಾಸಿಗಳ ಮನವಿ
ಹಾಸನ: ಗುಡಿಸಲು ವಾಸಿಗಳು ತಮಗೆ ಮನೆ ನೀಡುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಆಯುಕ್ತರಿಗೆ ಮನವಿ ನೀಡಿದರು.
ಈ ನಿವಾಸಿಗಳು ನಗರದ ಶ್ರೀನಗರದಲ್ಲಿ ಸುಮಾರು 30 ವರ್ಷಗಳಿಂದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಲಾಗುತ್ತಿದೆ. ಆದರೆ ತಮಗೆ ಮನೆ ಇಲ್ಲದೆ ಅವ್ಯವಸ್ಥೆಯಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ, ಮಳೆ, ಚಳಿಯಲ್ಲಿ ಕುಟುಂಬಗಳು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅವರ ಮುಂದೆ ಅಲವತ್ತುಕೊಂಡದರು.
ವಾಸ ಮಾಡಲು ಯಾವುದೇ ಮನೆ ಇಲ್ಲದರುವುದರಿಂದ ಜೀವನ ಅತಂತ್ರವಾಗಿದೆ. ಆದ್ದರಿಂದ ನಗರಸಭೆಯವರು ಈಗಲಾದರೂ ತಮಗೆ ಆಶ್ರಯ ಯೋಜನೆಯಲ್ಲಿ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ನೀಡಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಫಾತಿಮಾ, ಅಬ್ದೂಲಲ್ರಜಾಕ್, ಸಲೀಂ, ಅನ್ವರ್ಹಾಗೂ ಇತರರು ಇದ್ದರು.