ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೆಕ್ಕೆಜೋಳ ಖರೀದಿ ಸ್ಥಗಿತ: ರೈತರ ಪ್ರತಿಭಟನೆ

Rashmi Kasaragodu
Updated On : 31 Jan 2014, 12:48 pm

ಚನ್ನರಾಯಪಟ್ಟಣ: ಮೆಕ್ಕೆಜೋಳ ಖರೀದಿ ಸ್ಥಗಿತ ಮಾಡಿರುವುದನ್ನು ರಾಜ್ಯ ರೈತ ಸಂಘದ ತಾಲೂಕು ಘಟಕದ ಸದಸ್ಯರು  ಹಾಗೂ ರೈತರು ಪಟ್ಟಣದ ಎಪಿಎಂಸಿಯಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ರೈತ ಮುಖಂಡ ಅರಳಾಪುರ ಮಂಜುನಾಥ್ ನೇತೃತ್ವದಲ್ಲಿ ಸಂಘದ ಸದಸ್ಯರುಗಳು ಹಾಗೂ ರೈತರು ಸಹಾಯಧನದಲ್ಲಿ ನ್ಯಾಫೆಡ್ ವತಿಯಿಂದ ಖರೀದಿಸುತ್ತಿದ್ದ ಮೆಕ್ಕೆಜೋಳವನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಧರಣಿ ನಡೆಸಿದರು.
ಪರ್ಯಾಯ ವ್ಯವಸ್ಥೆಗೆ ಆಗ್ರಹ: ಧರಣಿ ಸ್ಥಳಕ್ಕೆ ಆಗಮಿಸಿದ ನ್ಯಾಪೆಡ್ ಅಧಿಕಾರಿಗಳು ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ತಾವು ಮೆಕ್ಕೆಜೋಳ ಖರೀದಿಸಲು ಸಿದ್ಧವಿದ್ದು, ಅದನ್ನು ಶೇಖರಿಸಲು ಗೋದಾಮಿನ ಕೊರೆತೆಯಿರುವ ಕಾರಣ ಖರೀದಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಹಾಸನದ ಗೋದಾಮು ಭರ್ತಿಯಾಗಿರುವ ಕಾರಣ ಪಟ್ಟಣದ ಎಪಿಎಂಸಿಯಲ್ಲಿ ಎರಡು ಲೋಡ್ಗೂ ಹೆಚ್ಚು ಮೆಕ್ಕೆಜೋಳ ದಾಸ್ತಾನಿದ್ದು, ಜಿಲ್ಲಾಧಿಕಾರಿಯವರು ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ತಾವು ಖರೀದಿಸಲು ಸಿದ್ಧ ಎಂದರು.
ಡಿ. 14ರಿಂದ ಸಹಾಯಧನದಲ್ಲಿ ಮೆಕ್ಕೆಜೋಳ ಖರೀದಿಸುತ್ತಿದ್ದು, 14,444 ಕ್ವಿಂಟಾಲ್ ಜೋಳವನ್ನು ಖರೀದಿಸಿದ್ದು, ಇನ್ನೂ ನೊಂದಣೆಯಾಗಿರುವ 105 ರೈತರಿಗೆ ಖರೀದಿ ದಿನಾಂಕವನ್ನು ನೀಡಲಾಗಿದೆ ಎಂದು ತಿಳಿಸಿದರು. ಮುಂದಿನ ಸೋಮವಾರದೊಳಗೆ ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಧರಣಿ ವಾಪಸ್ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement