'ಸಾಮೂಹಿಕ ಬದುಕಿಗೆ ಸಮೂಹ ಗಾಯನ'
ಬೇಲೂರು: ಸಣ್ಣ ಮಕ್ಕಳಲ್ಲಿ ನಾನಾ ಪ್ರಕಾರದ ಗೀತ ಗಾಯನಗಳನ್ನು ಸಮೂಹ ಗಾಯನದ ಮೂಲಕ ಹಾಡುವ ಮೂಲಕ ಅವರಲ್ಲಿ ಸಾಮೂಹಿಕ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಬಿ.ಎನ್. ಆನಂದ್ ತಿಳಿಸಿದರು.
ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ 65ನೇ ಗಣರಾಜ್ಯೋತ್ಸವ ಅಂಗವಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಒಂದು ವಿಭಿನ್ನ ವಿನೂತವಾದ ಕಾರ್ಯಕ್ರಮವನ್ನು ಬೇಲೂರು ಜನತೆಗೆ ನೀಡಿದೆ ಎಂದರು.
ಗಾಯನ ಮಾದರಿಯಾಗಲಿ: ಮಕ್ಕಳಲ್ಲಿ ಐಕ್ಯತೆ ಮತ್ತು ಅವರಲ್ಲಿ ದೇಶದ ಬಗ್ಗೆ ಗೌರವ, ಸಾಹಿತ್ಯದ ಬಗ್ಗೆ ಅಭಿಮಾನ ಹೀಗೆ ಹಲವು ಬಗೆಯಲ್ಲಿ ಅರಿವು ಮೂಡಿಸುವ ಹಿನ್ನಲೆಯಲ್ಲಿ ಸಮೂಹ ಗಾಯನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಇತಿಚೀನ ದಿನದಲ್ಲಿ ದೇಶದ ಬಗ್ಗೆ ಅಲೋಚನೆ ಮಾಡುವ ಜನತೆ ಕಡಿಮೆಯಾಗುತ್ತಾರೆ, ಕಾರಣ ಸ್ವಾರ್ಥದ ಪರಮಾವಧಿ ಮೀತಿ ಮೀರಿದ್ದು, ಅವರಿಗೆ ಈ ಸಮೂಹ ದೇಶ ಭಕ್ತಿ ಗಾಯನ ಮಾದರಿಯಾಗಲಿ ಎಂದರು.
ಬಿ.ಕೆ. ಸುಮಿತ್ರಾ ಹಾರೈಕೆ: ಕಾರ್ಯಕ್ರಮದ ಉದ್ಘಾಟಿಸಿದ ಗಾಯಕಿ ಬಿ.ಕೆ. ಸುಮಿತ್ರ ಮಾತನಾಡಿ, ನಾವು ದೇಶ-ವಿದೇಶ ಸೇರಿದಂತೆ 300ಕ್ಕೂ ಹೆಚ್ಚು ಸಮೂಹ ಗಾಯನದ ಶಿಬಿರಗಳನ್ನು ಅಯೋಜನೆ ಮಾಡಿದ್ದು, ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮಕ್ಕಳ ತಮ್ಮ ಸುಪ್ತ ಪ್ರತಿಭೆಯನ್ನು ಇಂತಹ ಶಿಬಿರದ ಮೂಲಕ ಹೋರ ಬರಲಿ ಎಂದು ಹಾರೈಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿ. ಮಂಜುನಾಥ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಡಿ.ಚಂದ್ರರೇಗೌಡ, ಅಮಿತ್ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ಧನ್, ತಾಪಂ ಅಧ್ಯಕ್ಷೆ ಶಾಂತಮ್ಮ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಟಿ.ಡಿ. ತಮ್ಮಣ್ಣಗೌಡ, ಆರ್.ಎಸ್. ಮಹೇಶ್, ಬಿರಟೆಮನೆ ಸುರೇಶ್, ಮಾ.ನ.ಮಂಜೇಗೌಡ, ಕೆ.ಎನ್. ಚಂದ್ರಶೇಖರ್, ಲಯನ್ಸ್ಸ್ಂಸ್ಥೆ ಅಧ್ಯಕ್ಷ ಪೂವಯ್ಯ ಇನ್ನು ಇತರರು ಇದ್ದರು. ಕಾರ್ಯಕ್ರಮದ ನಂತರ ಮಲ್ಲಿಗೆ ಸುಧೀರ್ ಅವರಿಂದ ಸುಗಮಸಂಗೀತ ಏರ್ಪಡಿಲಾಗಿತ್ತು.