ಹಾಸನ

ಹುತಾತ್ಮರ ದಿನಾಚರಣೆ

ಹಾಸನ: ಮಹಾತ್ಮ ಗಾಂಧೀಜಿ ಪುಣ್ಯದಿನದ ಅಂಗವಾಗಿ ಗುರುವಾರ ಜಿಲ್ಲಾಡಳಿತದಿಂದ ಹುತಾತ್ಮರ ದಿನಾಚರಣೆಯನ್ನು ಗೌರವ ಪೂರ್ವಕವಾಗಿ ಆಚರಿಸಲಾಯಿತು.  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಗಾಂಧೀಜಿಯವರ ಮೆಚ್ಚಿನ ಭಜನೆಗಳನ್ನು ಶಾಲಾ ಮಕ್ಕಳು ಹಾಡಿದರು.  ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರಂಜಿತ, ಚುನಾವಣಾ ತಹಸೀಲ್ದಾರ್ ಬಾಬುರಾವ್ ಸೇರಿದಂತೆ ನಾನಾ ಇಲಾಖಾ ಅಧಿಕಾರಿಗಳು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಹುತಾತ್ಮರಾದ ಮಹಾತ್ಮರ ಗೌರವಾರ್ಥ 3 ನಿಮಿಷಗಳ ಮೌನಾಚರಣೆ ಮೂಲಕ ಮೃತರ ಆತ್ಮಗಳಿಗೆ ಶಾಂತಿ ಕೋರಿ ಗೌರವ ಸಮರ್ಪಿಸಲಾಯಿತು.
ಇಂದು ಜನ ಸಂಪರ್ಕ ಸಭೆ
ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಹಾಸನ ವಿಭಾಗದ ವ್ಯಾಪ್ತಿಯ ಹಾಸನ, ಆಲೂರು, ಬೇಲೂರು ಮತ್ತು ಸಕಲೇಶಪುರ ತಾಲೂಕಿನ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು  ಪರಿಹರಿಸುವ ಸಲುವಾಗಿ, ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. ಜನ ಸಂಪರ್ಕ ಸಭೆಯು ಹಾಸನ ನಗರ ಸಂತೆಪೇಟೆಯ ಕಾರ್ಯ ಮತ್ತು ಪಾಲನ ನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ, ಆಲೂರು ಪಟ್ಟಣದ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ, ಬೇಲೂರು ಪಟ್ಟಣದ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರ ಕಚೇರಿ ಹಾಗೂ ಸಕಲೇಶಪುರದ ಕಾರ್ಯ ಮತ್ತು ಪಾಲನಾ ಉಪವಿಭಾಗದ  ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ನಡೆಯಲಿದೆ. ಗ್ರಾಹಕರು ವಿದ್ಯುತ್ ಶಕ್ತಿಗೆ ಸಂಬಂಧಪಟ್ಟ ಕುಂದುಕೊರತೆಗಳನ್ನು ಜ. 31ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೂ ನಡೆಯುವ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಲು  ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್) ಕೋರಿದ್ದಾರೆ.
 



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜಿನಾಮೆ ಕೊಡದ ದೀದಿಗೆ ಶಾಕ್; ತಮ್ಮ ವೀಟೋ ಅಧಿಕಾರ ಬಳಸಿ ಮಂತ್ರಿಮಂಡಲವನ್ನೇ ವಿಸರ್ಜಿಸಿದ ರಾಜ್ಯಪಾಲ ಆರ್‌ಎನ್ ರವಿ!

West Bengal: ಸುವೇಂದು ಅಧಿಕಾರಿ ಪಿಎ ಹತ್ಯೆ; ಕೊಲೆಗೆ ಬಳಸಲಾಗಿದ್ದ ಬೈಕ್ ವಶಕ್ಕೆ, ಪೊಲೀಸ್ ತನಿಖೆ ಚುರುಕು

ಆಗಸದಲ್ಲಿ ದಾರಿ ತಪ್ಪಿದ ಮಹಾರಾಷ್ಟ್ರ ಡಿಸಿಎಂ Eknath Shinde ಹೆಲಿಕಾಪ್ಟರ್; ಪೈಲಟ್ ಸಮಯ ಪ್ರಜ್ಞೆ, ಸುರಕ್ಷಿತ ಲ್ಯಾಂಡಿಂಗ್, Video!

ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್-ದೇವಿಶಾ ಶೆಟ್ಟಿ ಜೋಡಿಗೆ ಹೆಣ್ಣು ಮಗು ಜನನ

36 ಗಂಟೆಯಲ್ಲಿ 8 ಎನ್ಕೌಂಟರ್; 12 ಆರೋಪಿಗಳ ಹೆಡೆಮುರಿ ಕಟ್ಟಿದ ಉತ್ತರ ಪ್ರದೇಶ ಪೊಲೀಸರು!

SCROLL FOR NEXT