'ಚಾಲಕರು ರಸ್ತೆ ನಿಯಮ ಪಾಲಿಸಬೇಕು'
ರಾಮನಾಥಪುರ: ಚಾಲಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಕೆಲಸದ ಮೇಲಿರುವಾಗ ಮಧ್ಯಪಾನ- ಧೂಮಪಾನ ಮಾಡಬೇಡಿ, ನಿಗಮದ ಹಿತವನ್ನು ಕಾಪಾಡಿ ಎಂದು ಇಲ್ಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕ ಹೆಚ್.ಎನ್. ರಘು ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿರುವ ಸಾರಿಗೆ ಸಂಸ್ಥೆ ಘಟಕದಲ್ಲಿ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯೂ ದೇಶದಲ್ಲಿಯೇ ಅತೀ ಕಡಿಮೆ ಅಪಘಾತವನ್ನು ದಾಖಲಿಸಿ ಕೇಂದ್ರ ಸರ್ಕಾರದಿಂದ ಪಾರಿತೋಷಕವನ್ನು ಪಡೆದಿದೆ ಎಂದು ತಿಳಿಸಿದರು. ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಪತ್ರಕರ್ತ ದೇವಕಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಅರೋಗ್ಯ ಇಲಾಖೆ ಅಧಿಕಾರಿ ಲೋಕೇಶ್, ಘಟಕದ ಅಧಿಕಾರಿಗಳಾದ ಬಸವರಾಜ್, ಸುಬ್ಬಣ್ಣ, ಕೃಷ್ಣಯ್ಯ, ರಾಜು, ಸುರೇಶ್ ಇತರರು ಇದ್ದರು. ಎಸ್.ವೈ. ಮಂಜುನಾಥ್ ಸ್ವಾಗತಿಸಿ ವಂದಿಸಿದರು.