ಶ್ರೀನಗರ ನಿವಾಸಿಗಳ ಪ್ರತಿಭಟನೆ
ಹಾಸನ: ಸರ್ಕಾರದ ಸವಲತ್ತಿನಿಂದ ವಂಚಿತರಾಗಿರುವ ತಮಗೆ ಮನೆಯನ್ನು ನೀಡುವಂತೆ ಶ್ರೀನಗರ ವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ಹಾಸನ ನಗರದ ಶ್ರೀನಗರದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲಿನಲ್ಲಿ ಸಾವ ಮಾಡುತ್ತಿದ್ದು, ಕೂಲಿ ಮಾಡುವ ಮೂಲಕ ಜೀವನ ಸಾಗಿಸಲಾಗುತ್ತಿದೆ. ಈವರೆಗೂ ನಮಗೆ ವಾಸ ಮಾಡಲು ಯಾವುದೆ ಒಂದು ಮನೆಯಾಗಲಿ ಅಥವಾ ನಿರ್ಧಿಷ್ಟವಾದ ಜಾಗವಾಗಲಿ ಇಲ್ಲ. ಗಾಳಿ, ಮಳೆ ಚಳಿಯಲ್ಲಿ ನಮ್ಮ ಕುಟುಂಬ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೀವನ ಮಾಡುವುದೇ ಕಷ್ಟಕರವಾಗಿದೆ ಎಂದು ಅಲವತ್ತುಕೊಂಡರು.
ಜೊತೆಗೆ ನಮಗೆ ಪಡಿತರ ಚೀಟಿಯಾಗಲಿ ಅಥವಾ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಕೂಡ ಇಲ್ಲ. ಈವರೆಗೂ ನಮಗೆ ಯಾವುದೇ ರೀತಿಯ ಸವಲತ್ತುಗಳು ಸಹ ಸಿಕ್ಕಿಲ್ಲ. ಆದ್ದರಿಂದ ನಮಗೆ ಸರ್ಕಾರದ ಸವಲತ್ತು ಒದಗಿಸುವ ಮೂಲಕ ಮನೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಫಾತಿಮಾ, ಅಬ್ದೂಲ್ ರಜಾಕ್, ಸಲೀಂ, ಅನ್ವರ್ ಹಾಗೂ ಇತರರು ಇದ್ದರು.