ಅರಿವು ಮೂಡಿಸುವ ಕೆಲಸ ಆಗಿಲ್ಲ: ಲಕ್ಷ್ಮಣ
ಅರಸೀಕೆರೆ: ಸ್ವಾತಂತ್ರ್ಯ ಬಂದ ನಂತರ ಸಾವಿರಾರು ವಿಶ್ವವಿದ್ಯಾನಿಲಯಗಳು, ಶಾಲಾ-ಕಾಲೇಜುಗಳು ಸ್ಥಾಪನೆಯಾಗಿದ್ದರೂ ಒಳ್ಳೆಯ ವಿದ್ಯಾವಂತರನ್ನು ಆಯ್ಕೆಮಾಡಲು ಅರಿವು ಮೂಡಿಸುವ ಕಾರ್ಯಕ್ರಮ ಇದುವರೆವಿಗೂ ಆಗಿಲ್ಲ ಎಂದು ಪತ್ರಕರ್ತ ದು.ಗು. ಲಕ್ಷ್ಮಣ್ ಅಭಿಪ್ರಾಯಪಟ್ಟರು.
ಪಟ್ಟಣದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ಚಿಂತನ-ಮಂಥನ ಕಾರ್ಯಕ್ರಮದ ಬೌದ್ಧಿಕ್ನಲ್ಲಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ. ಪ್ರಾಮಾಣಿಕವಾಗಿ ಪ್ರಾಣೋಪಾಯದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಹಾಗೂ ಗ್ರಾಮದ ಶೌಚಾಲಯಗಳ ಸ್ವಚ್ಛತೆ ಮಾಡಲು ಗಂಭೀರ ಚಿಂತನೆ ಕಾಯಕವೇ ಕೈಲಾಸ ಎಂಬ ತತ್ವ ಸಿದ್ಧಾಂತ ಶಿಕ್ಷಕರಿಂದಲೇ ಸಾಧ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜೆ.ಜೆ. ಟ್ಯುಟೋರಿಯಲ್ ನಾರಾಯಣ ಶರ್ಮಾ ಮಾತನಾಡಿ, ಜೀವನ ಉದ್ದೇಶ, ಸಾಮರಸ್ಯ ಜೀವನ, ಮೌಲ್ಯಾಧರಿತ ಶಿಕ್ಷಣ, ವಾರಕ್ಕೆ ಒಂದು ದಿನವಾದರೂ 2 ಗಂಟೆ ಶ್ರಮದಾನ ಪ್ರಗತಿಗೆ ಮಾರ್ಗವಾಗುತ್ತದೆ ಎಂದರು. ಮೈಸೂರು ವಿಭಾಗದ ಸಂಪರ್ಕ ಪ್ರಮುಖ್ ಕೆ.ಎಂ. ಸತ್ಯನಾರಾಯುಣ್ ಮಾತನಾಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾಸಂಕಲ್ಪ ಶಾಲೆಯ ಅಧ್ಯಕ್ಷ ಶ್ರೀಧರ್ ತನಾಡಿದರು. ಕಾರ್ಯಕ್ರಮದಲ್ಲಿ ಶಿವಶಂಕರ, ನಾಗೇಶಮೂರ್ತಿ, ಶಶಿಧರ, ಕೊಟ್ರೇಶ್, ತ್ಯಾವರಿಮಟ್, ದಿಬ್ಬೂರು ರಮೇಶ್, ಕಾಮೇಶ್ವರಿ ಭಟ್ ಇದ್ದರು.