ನಾಮನಿರ್ದೇಶಿತ ಸದಸ್ಯರ ನೇಮಕ
ಹೊಳೆನರಸೀಪುರ: ಪಟ್ಟಣದ ಪುರಸಭೆಗೆ 5ಜನರನ್ನು ಪುರಸಭೆ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದೆ ಎಂದು ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ. 23 ಸದಸ್ಯ ಬಲದ ಇಲ್ಲಿನ ಪುರಸಭೆಯಲ್ಲಿ 5ಕಾಂಗ್ರೆಸ್,2ಪಕ್ಷೇತರ ಸದಸ್ಯರನ್ನು ಹೊರತುಪಡಿಸಿ ಇನ್ನುಳಿದಂತೆ 1 ಜೆಡಿಎಸ್. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷದ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಮಹಿಳಾ ವಿಭಾಗದಿಂದ 12ನೇ ವಾರ್ಡಿನ ಪದ್ಮ, ಪರಿಶಿಷ್ಟ ಜಾತಿ ವಿಭಾಗದಿಂದ ಅಂಬೇಡ್ಕರ್ ನಗರದ ಗೋವಿಂದರಾಜು, ಹಿಂದುಳಿದ ವರ್ಗದ ವಿಭಾಗದಿಂದ 1ನೇ ವಾರ್ಡಿನ ಸೂರನಹಳ್ಳಿ ಶ್ರೀನಿವಾಸ್, ಅಲ್ಪಸಂಖ್ಯಾತ ವಿಭಾಗದಿಂದ 3ನೇ ವಾರ್ಡಿನ ಮುಜಾಹಿದ್ ಪಾಷ ಹಾಗೂ ಸಾಮಾನ್ಯ ವಿಭಾಗದಿಂದ 12ನೇ ವಾರ್ಡಿನ ಕುಮಾರಸ್ವಾಮಿರನ್ನು ನಾಮ ನಿರ್ದೇಶನ ಮಾಡಿ ಆದೇಶ ನೀಡಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಸಚಿವ ಖಮರುಲ್ ಇಸ್ಲಾಂ ವಜಾಕ್ಕೆ ಆಗ್ರಹ
ಹಾಸನ: ವಕ್ಫ್ ಇಲಾಖೆಯ ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಹಕ್ಕು ಚ್ಯುತಿ ಆರೋಪ ಸಾಬೀತಾಗಿರುವ ವಕ್ಫ್ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ವಜಾಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಮನವಿ ನೀಡಿದರು.
ಕಾಯ್ದೆಗೆ ತಿದ್ದುಪಡಿ ಮಾಡಿ: ಸಚಿವ ಖಮರುಲ್ ಇಸ್ಲಾಂರನ್ನು ತಕ್ಷಣ ವಜಾ ಮಾಡಿ ವಕ್ಫ್ ಇಲಾಖೆಯನ್ನು ಸ್ವಚ್ಛಗೊಳಿಸಬೇಕು. ಕೋಟ್ಯಂತರ ರು.ಗಳ ಆಸ್ತಿ ಕಬಳಿಸಿರುವ ಕಳ್ಳರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ ಅವರು, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಮೋರ್ಚಾ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಗೊರೂರು ಸಲೀಂ, ಸಲೀಲ ಶರೀಪ್, ಜಿಲ್ಲಾಧ್ಯಕ್ಷ ಮಹಾಮದ್ ಲಾವಮಾನ್ ಶಹೀದ್, ನಗರಾಧ್ಯಕ್ಷ ಮಹಾಮದ್ ನಯಾಸ್, ಸಕಲೇಶಪುರ ತಾಲೂಕು ಅಧ್ಯಕ್ಷ ಮುದಾಸೀರ್ ಹಾಗೂ ಇತರರು ಇದ್ದರು.