ನಿರಾಶ್ರಿತ ಮಕ್ಕಳಿಗೆ ಆಹಾರ ವಿತರಣೆ
ಹೊಳೆನರಸೀಪುರ: ಮನುಷ್ಯನಿಗೆ ಅನ್ನ ಪ್ರಮುಖವಾಗಿದೆ ಎಂದು ರೋಟರಿ ಅಧ್ಯಕ್ಷ ರೊ.ಆರ್.ಬಿ. ಪುಟ್ಟೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಹೊಳೆನರಸೀಪುರ ರೋಟರಿ ಸಂಸ್ಥೆಯಿಂದ ಮಂಗಳವಾರ ಪಟ್ಟಣದ ನಿರಾಶ್ರಿತರ ಕ್ಯಾಂಪಿನ ಮಕ್ಕಳಿಗೆ ಆಹಾರ ನೀಡಿ ಮಾತನಾಡಿ, ಪ್ರಪಂಚದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳನ್ನು ಬೆಳಕಿಗೆ ತರಲು ಜುಲೈ ಮೊದಲ ದಿನವನ್ನು ರೋಟರಿ ಅನ್ನಪೂರ್ಣ ದಿನವೆಂದು ಆಚರಿಸಲು ಪ್ರಾರಂಭಿಸಿದೆ ಎಂದರು. ರೋಟರಿ ಹಿರಿಯ ಸದಸ್ಯ ರೊ.ಡಾ.ಕೆ.ಸಿ. ಮರಿಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಯೋಜಿತ ಅಧ್ಯಕ್ಷ ರೊ.ಶಿವಕುಮಾರ್, ಅಶೋಕ್, ಜೆ.ಟಿ. ಸ್ವಾಮಿ ಇದ್ದರು.