ಅನ್ನಪೂರ್ಣ ದಿನಾಚರಣೆ
ಹಾಸನ: ನಗರದ ಗೌರಿಕೊಪ್ಪಲಿನಲ್ಲಿ ಇರುವ ಜೀವನ ಜ್ಯೋತಿ ಕಿವುಡ ಮಕ್ಕಳ ವಸತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ರೋಟರಿ ವರ್ಷಾರಂಭದ ದಿನದ ಅಂಗವಾಗಿ ಅನ್ನಪೂರ್ಣ ದಿನವನ್ನಾಗಿ ಆಚರಿಸಲಾಯಿತು. ರೋಟರಿ ಜಿಲ್ಲಾ ಗೌರ್ನರ್ಗಳ ಆಶಯದಂತೆ ಕ್ಲಬ್ ವತಿಯಿಂದ ವಸತಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಭೋಜನವನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಅನ್ನಪೂರ್ಣ ದಿನವನ್ನು ಆಚರಿಸಲಾಯಿತು. ನಂತರ ಶಾಲೆಯ ಮಕ್ಕಳ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಿವಿ, ಮೂಗು, ಗಂಟಲು ತಜ್ಞರು ಹಾಗೂ ಕ್ಲಬ್ನ ರೊಟೇರಿಯನ್ ಎಂ.ಕೆ.ನಾಗೇಶ್ ಮತ್ತು ವಾಕ್ ಶ್ರಾವಣ ತಜ್ಞೆ ರಚನಾ ಇದ್ದರು. ಅಧ್ಯಕ್ಷ ಜಿ.ಕೆ.ಲಲಿತ್ಕುಮಾರ್, ಕಾರ್ಯದರ್ಶಿ ಎನ್.ಎಸ್. ಸೀತಾರಾಮ್, ಹಿರಿಯ ರೊಟೇರಿಯನ್ಗಳಾದ ಡಾ.ಸುಧೀರ್ ಬೆಂಗಳೂರು, ಡಾ. ಗೋವಿಂದರಾಜ್, ಎ.ಎಂ.ರಘು ಹಾಗೂ ಹಲವಾರು ರೊಟೇರಿಯನ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.