ಚನ್ನರಾಯಪಟ್ಟಣದಲ್ಲಿ ಪಿಯು ಕಾಲೇಜು ಆರಂಭ
ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶದ ಮಕ್ಕಳ ಉತ್ತಮ ವ್ಯಾಸಂಗಕ್ಕಾಗಿ ಟೈವಮ್ಸಿಪಿಯುಸಿ ಕಾಲೇಜು ಪಟ್ಟಣಕ್ಕೆ ಅತ್ಯವಶ್ಯಕವಾಗಿತ್ತು ಎಂದು ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಸಮೀಪದಲ್ಲಿ ಇತ್ತೀಚೆಗೆ ನೂತನವಾಗಿ ಪ್ರಾರಂಭ ವಾಗಿರುವ ಟೈವಮ್ಸಿ ಪಿಯು ಕಾಲೇಜನ್ನು ಅಧಿಕೃತವಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ಲಾಭದಾಯಕ ಎಂಬುವ ನಿಟ್ಟಿನಲ್ಲಿ ಪೈಪೋಟಿ ಮೇಲೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ. ಆದರೆ ಗುಣಮಟ್ಟದ ಸಂಸ್ಥೆಗಳು ವಿರಳವಾಗುತ್ತಿವೆ ಎಂದರು.
ನಂಬಿಕೆ ಉಳಿಸಿಕೊಳ್ಳುತ್ತೇವೆ: ಕಾಲೇಜಿನ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡುತ್ತಾ, ನಮ್ಮ ಮೇಲೆ ನಂಬಿಕೆಯಿಟ್ಟು ತಮ್ಮ ಮಕ್ಕಳನ್ನು ನೂತನ ಕಾಲೇಜಿಗೆ ದಾಖಲಾತಿ ಮಾಡಿದ್ದೀರಿ. ನಿಮ್ಮ ನಂಬಿಕೆಗೆ ಎಂದೂ ಲೋಪವಾಗದಂತೆ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮವನ್ನು ಕುರಿತು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಜಯಲಕ್ಷ್ಮೀ ರಾಜಣ್ಣಗೌಡ, ರವಿ ನಾಕಲಗೂಡು, ಕಾಲೇಜಿನ ಪ್ರಾಂಶುಪಾಲರಾದ ಸುಧೀಂದ್ರ ಮತ್ತು ನವೀನ್ ಪಾಲ್ಗೊಂಡಿದ್ದರು.