ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 4 Jul 2014, 1:23 am

ಕನ್ನಡಪ್ರಭ ವಾರ್ತೆ, ಹಾಸನ. ಜು.3
ತೈಲಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ವೀರಕನ್ನಡಿಗರ ಸೇನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಎತ್ತಿನ ಗಾಡಿ, ಜಟಕಾಬಂಡಿ ಹಾಗೂ ಬೈಕ್ಗಳನ್ನು ತಳ್ಳುವ ಮೂಲಕ ಮೆರವಣಿಗೆ ಪ್ರಾರಂಭಿಸಿಎನ್ಆರ್ ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿಗೆ ನೀಡಿದರು.
 ನೂತನವಾಗಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದು ಖಂಡನೀಯ. ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವುದರಿಂದ ಜನ ಸಾಮಾನ್ಯರಿಗೆ ಜೀವನ ನಿರ್ವಹಿಸುವುದು ಬಹಳಷ್ಟು ತೊಂದರೆಯಾಗುತ್ತಿದೆ. ಅಧಿಕಾರಕ್ಕೆ ಬಂದ ತಕ್ಷಣ ಕೇದ್ರ ಸರ್ಕಾರಿ ಈ ರೀತಿ ಅಗತ್ಯವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.
ಮಾತಿಗೆ ತಪ್ಪಿದ ಬಿಜೆಪಿ: ಚುನಾವಣೆಗೂ ಮುನ್ನ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುವುದಾಗಿ ಹೇಳಿ ಈಗ ಎಲ್ಲಾ ವಸ್ತುಗಳನ್ನು ದರವನ್ನು ಏರಿಕೆ ಮಾಡಿರುವುದು ಬಿಜೆಪಿ ತಕ್ಕದಲ್ಲ. ಕೊಟ್ಟ ಮಾತಿಗೆ ಬಿಜೆಪಿ ತಪ್ಪಿದಂತಾಗಿದೆ.
ಆದ್ದರಿಂದ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಯ ಹೊರೆಯನ್ನು ಹಿಂಪಡೆದು ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭ     ಟನೆಯಲ್ಲಿ ಜಿಲ್ಲಾಧ್ಯಕ್ಷ ಎಚ್. ಎನ್. ನಟೇಶ್, ಉಪಾಧ್ಯಕ್ಷ ಅನಂತರಾಜು, ಜಮೀರ್, ಸಿದ್ದೇಶ್ ಕುಮಾರ್, ದಿನೇಶ್, ಆರೀಫ್, ಯೋಗೀಶ್ ಗೌಡ, ತೋಫಿಕ್ ಫಾಷ, ಕುಮಾರ ಮಂಗಳಂ, ರಾಜೇಶ್, ರಾಜು, ನವೀನ್ ಕುಮಾರ್, ಆನಂದ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement