ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೂಚನಾ ಫಲಕ ಹಾಕಲು ಆಗ್ರಹ

Rashmi Kasaragodu
Updated On : 4 Jul 2014, 1:24 am

ಅರಸೀಕೆರೆ: ಬೆಂಗಳೂರು ಮತ್ತು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಟ್ಟಣದ ಸಮೀಪ ದೂರದ ಜಾಜೂರು ಗ್ರಾಮದ ಮಧ್ಯೆ ಹಾದು ಹೋಗಿದ್ದು, ರಸ್ತೆಯ ಎರಡೂ ಭಾಗದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ.
ಅಲ್ಲದೇ ನಾಗತೀಹಳ್ಳಿ ಗ್ರಾಮಕ್ಕೆ ಹೋಗುವ ತಿರುವು ರಸ್ತೆಯಿದ್ದು, ಯಾವುದೇ ಸೂಚನಾ ಫಲಕ ಅಳವಡಿಸದ ಕಾರಣ ರಸ್ತೆ ಅಪಘಾತಗಳಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದಕಾರಣ ಈ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಜಾಜೂರು ಗ್ರಾಮದ ಎರಡು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತುಂಬಾ ಇಳಿಜಾರಿನಲ್ಲಿದ್ದು ಅತೀ ವೇಗದಲ್ಲಿ  ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಶಾಲೆಗೆ ಮಕ್ಕಳು ಹೋಗುವ ಸಂದರ್ಭದಲ್ಲಿ ಭೀತಿಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಸೂಚನಾ ಫಲಕಗಳನ್ನು ಹಾಕಿ ವಾಹನ ಚಾಲಕರಿಗೆ ಶಾಲೆ ಇರುವ ಬಗ್ಗೆ ಮಾಹಿತಿ ನೀಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ನಾಗತೀಹಳ್ಳಿ ಗ್ರಾಮದ ತಿರುವಿನ ಜಾಗದಲ್ಲಿ ರಸ್ತೆಯ ಎರಡು ಕಡೆಗಳಿಂದ ಬರುವ ವಾಹನಗಳನ್ನು ಚಾಲಕರು ವೀಕ್ಷಿಸಲು ಸಾಧ್ಯವಾಗದೆ ಏಕಾಏಕಿ ನುಗ್ಗುವ ಕಾರಣ ಅಪಘಾತಗಳು ಸಂಭವಿಸಿಅನೇಕ ಜನರು ಪ್ರಾಣ ಕಳೆದುಕೊಂಡರೆ ಕೆಲವರು ಅಂಗವಿಕಲರಾಗಿದ್ದಾರೆ.
ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಇಂತಹ ಸೂಕ್ಷ್ಮ ಪ್ರದೇಶದಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವ ಸೂಚನಾ ಫಲಕಗಳನ್ನು ತಕ್ಷಣ ಆಳವಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement