ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆಯಲ್ಲಿ ಕೃಷಿ ಉತ್ಸವ ಇಂದು

Rashmi Kasaragodu
Updated On : 4 Jul 2014, 11:42 am

ಅರಸೀಕೆರೆ: ರೇಷ್ಮೆ, ಜಲಾನಯನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೃಷಿ ಇಲಾಖೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ,ಜಲನಯನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಕೃಷಿಕ ಸಮುದಾಯ, ಕೃಷಿ ಸಂಶೋಧನಾ  ಕೇಂದ್ರ ಹಾಗೂ ವಾರ್ತಾ ಇಲಾಖೆ ಸಹಕಾರ ಇಲಾಖೆ, ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಜು.5ರಂದು ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ 2014ನೇ ಸಾಲಿನ ಕೃಷಿ ಉತ್ಸವ ಆಯೋಜಿಸಲಾಗಿದೆ ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪಾಲ್ಗೊಳ್ಳಲಿದ್ದು, ಉತ್ಸುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೇಲೂರು ಶಾಸಕ ವೈ.ಎನ್. ರುದ್ರೇಶ್ ಗೌಡ ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ ಅವರು ಅಂದು ಬೆಳಗ್ಗೆ ಮದ್ಯಹ್ನಾ 10.30ಕ್ಕೆ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಸೇರಿದಂತೆ ತಾಂತ್ರಿಕ ಸಮಾವೇಶದ ಕಾರ್ಯಕ್ರಮಗಳು ಜರುಗುವುದಾಗಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಪಿಂಚಣಿ ಹೆಚ್ಚಳ
ಹಾಸನ: ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಪಿಂಚಣಿದಾರರಿಗೆ ಹಾಲಿ ನೀಡುತ್ತಿರುವ ಸ್ವಾತಂತ್ರ್ಯ ಹೋರಾಟಗಾರರ ರಾಜ್ಯ ಗೌರವಧನವನ್ನು ಜೂನ್ 1ರಿಂದ ಜಾರಿಗೆ ಬರುವಂತೆ ಮಾಸಿಕ ರು. 6,000ದಿಂದ ರು. 8,000ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರವು ಆದೇಶಿಸಿದೆ ಎಂದು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಾರ್ಯಾಧ್ಯಕ್ಷ ಎಚ್.ಎಂ.ಶಿವಣ್ಣ ತಿಳಿಸಿದ್ದಾರೆ.
ರೈತರು ಪಹಣಿ ಪಡೆಯುವಾಗ ಸಹಕರಿಸಲು ಮನವಿ
ಹಾಸನ: ಜಿಲ್ಲೆಯಲ್ಲಿ ಒಟ್ಟು 9 ಲಕ್ಷ ಪಹಣಿಗಳಿದ್ದು, ಜನವರಿಯಿಂದ ಮಾರ್ಚ್ವರೆಗೆ ಬೇಸಿಗೆ, ಏಪ್ರಿಲ್ನಿಂದ ಜೂನ್ ವರೆಗೆ ಹಿಂಗಾರು, ಜುಲೈನಿಂದ ಡಿಸೆಂಬರ್ವರೆಗೆ ಮುಂಗಾರು, ಬೆಳೆ ಇಂಡೀಕರಣ ನಡೆಯುತ್ತಿರುತ್ತದೆ.  ಈ ಅವಧಿಯಲ್ಲಿ ಪ್ರತಿ ಪಹಣಿಗೂ ಡಿಜಿಟಲ್ ಸಹಿ ಮಾಡಿಸಲಾಗುತ್ತಿದ್ದು, ಬೇರೆ ಸೇವೆಗಳಾದ ಪಹಣಿ ವಿತರಿಸುವುದು, ಅರ್ಜಿ ಸ್ವೀಕೃತಿ ಇಂತಹ ಸೇವೆಗಳನ್ನು ಕಲ್ಪಿಸಲು ತಾತ್ಕಾಲಿಕ ವಿಳಂಬ ಆಗುವ ಸಂಭವ ಇರುತ್ತೆ. ಆದ್ದರಿಂದ ಜಿಲ್ಲೆಯ ಎಲ್ಲಾ ಭೂಮಿ ಕೇಂದ್ರಗಳಲ್ಲಿ ಜುಲೈ ಅಂತ್ಯದವರೆಗೆ ರೈತರು ಪಹಣಿಗಳನ್ನು ಪಡೆಯುವಾಗ ತಾಲೂಕು ಕಚೇರಿ ಸಿಬ್ಬಂದಿಯೊಂದಿಗೆ ತಾಳ್ಮೆಯಿಂದ ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement