ಆಯುರ್ವೇದ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ
ಹಾಸನ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಒಕ್ಕೂಟದ ವತಿಯಿಂದ ವೈದ್ಯರ ದಿನಾಚರಣೆ ನಿಮಿತ್ತ ಮಂಥನ ಸಂವಾದ ಆಯೋಜಿಸಲಾಗಿತ್ತು. ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹ ರಾವ್, ಹಿರಿಯ ವೈದ್ಯರಾದ ಡಾ. ಶೈಲಜಾ, ಡಾ. ಮುರಳೀಧರ್ ಪೂಜಾರ್, ಡಾ. ನಾರಾಯಣ ಪ್ರಕಾಶ್, ಡಾ. ಟಿ.ಬಿ ತ್ರಿಪಾಠಿ, ಡಾ. ಅಶ್ವಿನಿಕುಮಾರ್ ಹಾಗೂ ಶಶಿರೇಖಾ ಸಂವಾದದಲ್ಲಿ ಪಾಲ್ಗೊಂಡು ವೈದ್ಯಕೀಯ ವೃತ್ತಿಯ ಮಹತ್ವ, ಯುವ ವೈದ್ಯ ಪದವೀಧರರ ಎದುರಿಗೆ ಇರುವ ಸವಾಲುಗಳು, ಆಯುರ್ವೇದ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು. 10 ವೈದ್ಯರಿಗೆ ಸನ್ಮಾನ ಮಾಡಲಾಯಿತು. ಡಾ. ಪ್ರಸನ್ನ ನರಸಿಂಹ ರಾವ್, ಡಾ. ಶೈಲಜಾ, ಡಾ. ನಾರಾಯಣ ಪ್ರಕಾಶ್ ಮತ್ತಿತರರು ವೈದ್ಯರಾಗಿ ಸನ್ಮಾನ ಸ್ವೀಕರಿಸಿದರು.