ಕಾಡಾನೆ ದಾಳಿಗೆ ಸಿಲುಕಿದ ಮಹಿಳೆಯತ್ತ ನಿರ್ಲಕ್ಷ್ಯ
ಹಾಸನ; ಸರ್ಕಾರಿ ನೌಕರರು ಯಾವ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರೂ ಇಲಾಖೆಯಲ್ಲಿ ಹಾಗೂ ಜನ ಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಸೇವೆ ಸಲ್ಲಿಸಿದಾಗ ಮಾತ್ರ ಅವರ ನೌಕರಿ ಸಾರ್ಥಕವಾಗುತ್ತದೆ. ಅವರ ಹೆಸರು ಎಲ್ಲರ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಸಹಾಯಕ ಅಭಿಯಂತರ ಸಿ.ಎಂ. ವೆಂಕಟರಮಣಪ್ಪ ತಿಳಿಸಿದರು.
ಗೊರೂರಿನ ಹೇಮಾವತಿ ಅಣೆಕಟ್ಟು ಉಪವಿಭಾಗದ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಚಾಲಕರಾಗಿ, ಎಲೆಕ್ಟ್ರೀಷನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟರಾಮಯ, ತಿಮ್ಮೇಗೌಡ, ಕೃಷ್ಣೇಗೌಡ ಅವರನ್ನು ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪ್ರಸಾದ್, ಸಹ ಕಾರ್ಯಪಾಲಕ ಅಭಿಯಂತರ ತಿರುಮಲಸ್ವಾಮಿ, ಸಿದ್ದರಾಮಪ್ಪ, ಗೊರೂರು ಶಾಖೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ರುದ್ರಪ್ಪ ಸೇರಿದಂತೆ ಕಚೇರಿ ಸಿಬ್ಬಂದಿ ಸನ್ಮಾನಿಸಿದರು. ವೇದಿಕೆಯಲ್ಲಿ ಕಾವೇರಿ ನೀರಾವರಿ ನಿಗಮದ ಜಿ.ಬಿ. ನಾಗರಾಜ್, ಎಂಜಿನಿಯರ್ಗಳಾದ ಸಂದೀಪ್, ಚನ್ನಕೇಶವ, ಪುಟ್ಟಸ್ವಾಮಿ, ಶಿವಮೂರ್ತಿ ಇದ್ದರು.