ಜಮೀನು ವಿವಾದ: ಅತ್ತಿಗೆ ಮೇಲೆ ಹಲ್ಲೆ
ಚನ್ನರಾಯಪಟ್ಟಣ: ತಾಲೂಕಿನ ದೇವಿಗೆರೆ ಗ್ರಾಮದಲ್ಲಿ ಜಮೀನಿನ ವಿವಾದದಿಂದ ಹಿನ್ನೆಲೆಯಲ್ಲಿ ತನ್ನ ಅತ್ತಿಗೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಗ್ರಾಮದಿಂದ ಪರಾರಿಯಾಗಿದ್ದಾನೆ. ಗ್ರಾಮದ ರತ್ನಮ್ಮ ಅವರು ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಮೈದುನ ಕೃಷ್ಣೇಗೌಡ ಮತ್ತು ಆತನ ಪುತ್ರ ಹರೀಶ್ ಅವರು ಏಕಾಏಕಿ ರತ್ನಮ್ಮ ಮೇಲೆ ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಕೃಷ್ಣೇಗೌಡ ಅವರು ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾಗಿ ನಿವೃತ್ತರಾಗಿದ್ದರೆ, ಆತನ ಪುತ್ರ ಹರೀಶ್ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಅರಿವಿರುವರೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ರತ್ನಮ್ಮ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನುಗ್ಗೇಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.