ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೂವರಿಗೆ ಡಾಕ್ಟರೇಟ್ ಪದವಿ

Rashmi Kasaragodu
Updated On : 4 Jul 2014, 11:49 am

ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ  ಮೂವರು ಪ್ರಾಧ್ಯಾಪಕರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ  ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಯೋಜಿತ ಪ್ರಾಧ್ಯಾಪಕಿ ಪ್ರೊ.ಬಿ.ಆರ್. ಸುಜಾತಾ ಆಪ್ಟಿಮಂ ರಿಸೋರ್ಸ್ ಯುಟಿಲೈಸೇಷನ್ ಟೆಕ್ನಿಕ್ಸ್ ಫಾರ್ ರೂಟಿಂಗ್ ಇನ್ ಮೆನೆಟ್ಸ್ ಎಂಬ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಇವರು ಡಾ.ಎಂ.ವಿ. ಸತ್ಯನಾರಾಯಣ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಕಾಲೇಜಿನ  ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಂಯೋಜಕ ಪ್ರಾಧ್ಯಾಪಕಿ ಪ್ರೊ.ಜೆ. ಚಂದ್ರಿಕಾ ರಿಸೋರ್ಸ್ ಅಡಾಪ್ಟಿವ್ ಕ್ವಾಲಿಟಿ ಅಶ್ಯುರಿಂಗ್ ಟೆಕ್ನಿಕ್ಸ್ ಫಾರ್ ಮೈನಿಂಗ್ ಡಾಟಾ ಸ್ಟ್ರೀಮ್ಸ್ ಈ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು  ಡಾ.ಕೆ.ಆರ್. ಆನಂದ ಕುಮಾರ್ ಮಾರ್ಗದರ್ಶನದಲ್ಲಿ ಸಂಶೋಧನೆ  ನಡೆಸಿದ್ದರು.
ಕಾಲೇಜಿನ ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ಸಂಯೋಜಕ ಪ್ರಾಧ್ಯಾಪಕ ಪ್ರೊ.ಎಂ.ಕೆ. ರವಿಶಂಕರ್ ಅನಾಲಿಟಿಕಲ್ ಆಂಡ್ ಎಕ್ಸ್ಪಿರಿಮೆಂಟಲ್ ಸ್ಟಡೀಸ್ ಆನ್ ದ ಡೈನಮಿಕ್ಸ್ ಆಫ್ ಎ ಟ್ರಾಕ್ಡ್ ವೆಹಿಕಲ್ ಈ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ಸಿ. ಸುಜಾತ ಮಾರ್ಗದರ್ಶನದಲ್ಲಿ ಸಂಶೋಧನೆ ಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement