ರೇಷ್ಮೆ ಕೃಷಿ ವಿಚಾರ ಸಂಕಿರಣ ಸಂಪನ್ನ
ಪಾಂಡವಪುರ: ತಾಲೂಕಿನ ಅತ್ತಿಗಾನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ವತಿಯಿಂದ ರೇಷ್ಮೆ ಕೃಷಿ ವಿಚಾರ ಸಂಕಿರಣ ನಡೆಯಿತು.ನೈಸರ್ಗಿಕ ಕೃಷಿಕ ಹಾಡ್ಯ ರಮೇಶ್ರಾಜ್ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ರೇಷ್ಮೆ ಕೃಷಿಕರ ಅಗತ್ಯತೆಗಳನ್ನು ಪೂರೈಸಲು, ರೇಷ್ಮೆಗೂಡು ಉತ್ಪಾದನೆಗಳ ಕುರಿತು ಕಾರ್ಯಕ್ರಮ ಆಯೋಜಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ತಾಲೂಕು ಕೃಷಿ ಅಧಿಕಾರಿ ಗಣೇಶ್ ಬಾನಪ್ಪ, ರೈಷ್ಮೆ ಕೃಷಿ ಕುರಿತು ವಿವರಣೆ ನೀಡಿದರು. ಸಂಸ್ಥೆಯ ಜಿಲ್ಲಾ ನಿರ್ದೇಶಕ ಎ.ಯೋಗಿಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಎನ್. ಮೇದಪ್ಪ, ಪ್ರಗತಿಪರ ಕೃಷಿಕರಾದ ಮೊಗಣ್ಣೇಗೌಡ, ಮಲ್ಲಮ್ಮರ ದೇವೇಗೌಡ, ನಂದಿಶಣ್ಣ, ನಂಜೇಗೌಡ, ಸುಂಕಾ ತೊಣ್ಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಶಿವಕುಮಾರ, ಮುಖ್ಯ ಶಿಕ್ಷಕ ಮಹದೇವಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಉಪಸ್ಥಿತರಿದ್ದರು. ಸಮನ್ವಯಾಧಿಕಾರಿ ಅನಿತಾಶೆಟ್ಟಿ, ವಲಯ ಅನಿತಾ, ಕೃಷ್ಣೇಗೌಡ, ಕೆಂಚೇಗೌಡ, ದಿನೇಶ್ ಭಾಗವಹಿಸಿದ್ದರು.