ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲೋಕಾಯುಕ್ತ ಬಲೆಗೆ ಗೊರೂರು ಗ್ರಾಪಂ ಪಿಡಿಒ

Rashmi Kasaragodu
Updated On : 5 Jul 2014, 12:04 pm

ಹಾಸನ: ಮನೆ ಮತ್ತು ನಿವೇಶನ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗೊರೂರು ಗ್ರಾಮ ಪಂಚಾಯ್ತಿ ಯೋಜನಾಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರು ಶುಕ್ರವಾರ ಸಂಜೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಗ್ರಾಮ ಪಂಚಾಯ್ತಿ ಪಿಡಿಒ ರೇಣುಕಾ ಎಂಬುವರೇ ಬಂಧಿತರು. ಗೊರೂರಿನ ಕೀರ್ತಿ ಎಂಬುವರು ಮನೆ, ನಿವೇಶನವನ್ನು ತಾಯಿ ಹೆಸರಿಂದ ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಅರ್ಜಿ ನೀಡಿದ್ದರು. ಆದರೆ ಅದಕ್ಕಾಗಿ 3 ಸಾವಿರ ಲಂಚ ನೀಡಬೇಕೆಂದು ಪೀಡಿಸುತ್ತಿದ್ದ ಪಿಡಿಒ ಲಂಚವಾಗಿ 3 ಸಾವಿರ ಹಾಸನ ನಗರದ ತಾಲೂಕು ಪಂಚಾಯ್ತಿಗೆ ಕೀರ್ತಿಯನ್ನು ಕರೆಸಿಕೊಂಡು ಲಂಚ ಸ್ವೀಕರಿಸುತ್ತಿದ್ದಾಗ ಪಿಡಿಓ ರೇಣುಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಲೋಕಾಯುಕ್ತ ಎಸ್ಪಿ ವೇದಮೂರ್ತಿ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ನರಸಿಂಹಮೂರ್ತಿ ಮತ್ತು ಸಿಬ್ಬಂದಿ  ಎ.ಎನ್. ಕುಮಾರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement