ಸಿಲಿಂಡರ್ ಕಳ್ಳನಿಗೆ ಗಾಯ
ಹಾಸನ: ಸಿಲಿಂಡರ್ ಕಳವು ಮಾಡಲು ಹೋದ ಕಳ್ಳನೊಬ್ಬ ಗೇಟ್ ಮೇಲೆ ಬಿದ್ದು, ಕಬ್ಬಿಣ ಸಲಾಕೆ ತೊಡೆಗೆ ಚುಚ್ಚಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಶುಕ್ರವಾರ ನಡೆದಿದೆ. ಬೇಲೂರು ತಾಲೂಕಿನ ಕುಮಾರ್ ಎಂಬಾತನೆ ಗೇಟ್ ಹಾರಲು ಹೋಗಿ ಸಿಕ್ಕಿಕೊಂಡವ. ನಗರದ ಆಡುವಳ್ಳಿ ಸರ್ಕಾರಿ ಶಾಲೆಯಲ್ಲಿ ಕುಮಾರ್ ಅಡುಗೆ ಸಿಲಿಂಡರ್ ಕಳವು ಮಾಡಿದ್ದಾನೆ. ನಂತರ ಆತ ಶಾಲೆಯ ಗೇಟ್ ಹಾರುವಾಗ ಸಲಾಕೆ ಆತನ ತೊಡೆಗೆ ಚುಚ್ಚಿಕೊಂಡಿದೆ. ಅದರಿಂದ ಬಿಡಿಸಲು ಸಾಧ್ಯವಾಗದ ಕಾರಣ ಕಬ್ಬಿಣ ಕತ್ತರಿಸಿ ಆತನನ್ನು ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ. ನಂತರ ಆತನ ತೊಡೆದಿಂದ ಕಬ್ಬಿಣದ ಸಲಾಕೆಯನ್ನು ಹೊರ ತೆಗೆಯಲು ವೈದ್ಯರು ಹರಸಾಹಸ ಮಾಡಿದ್ದಾರೆ. ಕುವೆಂಪುನಗರ ಬಡಾವಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.