ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುಗಮ ಸಂಚಾರಕ್ಕೆ ಸಾರ್ವಜನಿಕರಲ್ಲಿ ಮನವಿ

Rashmi Kasaragodu
Updated On : 4 Jul 2014, 11:42 am

ಬೇಲೂರು: ಬೇಲೂರಿಗೆ ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದ್ದರಿಂದ ಸಾರ್ವ ಜನಿಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೆ ಪಾರ್ಕಿಂಗ್ ಜಾಗದಲ್ಲಿ ಸರಿಯಾದ ರೀತಿಯಲ್ಲಿ ನಿಲ್ಲಿಸಬೇಕು. ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಬೇಲೂರು ಪೊಲೀಸ್ ಠಾಣೆ ಪಿಎಸ್ಐ ಆನಂದ ಕುಮಾರ್ ಮನವಿ ಮಾಡಿದರು.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರಿನಲ್ಲಿ ರಸ್ತೆಗೆ ತಕ್ಕಂತೆ ವಾಹನಗಳಿಲ್ಲ. ವಾಹನಗಳಿಗೆ ತಕ್ಕಂತೆ ರಸ್ತೆಗಳಿಲ್ಲ. ರಸ್ತೆ ಕಿರಿದಾಗಿರುವುದರಿಂದ ವಾಹನಗಳನ್ನು ನಿಗದಿತ  ಸ್ಥಳಗಳಲ್ಲೆ ನಿಲ್ಲಿಸಬೇಕು. ಮತ್ತು ರಸ್ತೆ ಅಗಲವಾದಲ್ಲಿ ವಾಹನ ದಟ್ಟಣೆಯನ್ನು ತಡೆಗಟ್ಟಬಹುದು.
ಸ್ವಚ್ಛ ಪರಿಸರ: ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮತ್ತು ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೆ ಸ್ವಚ್ಛತೆ ಕಾಪಾಡಬೇಕು. ಕಾರಣ ಪ್ರವಾಸಿಗರು ದಿನನಿತ್ಯ ಬಂದು ಹೋಗುವುದರಿಂದ ಸ್ಥಳೀಯರನ್ನು ದೂಷಿಸದಂತೆ ಪರಿಸರವನ್ನು ಸಂರಕ್ಷಣೆಯತ್ತ ನಾಗರೀಕರು ಹೆಚ್ಚಿನ ಗಮನಹರಿಸಬೇಕು.
ಇತ್ತೀಚಿನ ದಿನಗಳಲ್ಲಿ ಒಂಟಿ ಮನೆಗಳ ಲೂಟಿ, ಕಳ್ಳತನ, ದರೋಡೆ, ಗಮನ ಬೇರೆಡೆ ಸೆಳೆದು ಸಾರ್ವಜನಿಕರಿಂದ ಹಣ ಆಭರಣಗಳನ್ನು ಅಪಹರಿಸುವುದು.
ವಾಣಿಜ್ಯ ಕೇಂದ್ರಗಳಲ್ಲಿ, ಆಭರಣ ಅಂಗಡಿಗಳಲ್ಲಿ ಕಳ್ಳತನ ಜಾಸ್ತಿಯಾಗಿರುವುದರಿಂದ ವಾಣಿಜ್ಯ ಹಾಗೂ ಜ್ಯೂಯಲರಿ ಶಾಪ್ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾಗ್ರತೆ ಇರಲಿ: ಸಾರ್ವಜನಿಕರು ಅದರಲ್ಲೂ ಮಹಿಳೆಯರು ಹೆಚ್ಚಿಗೆ ಹಣ ಮತ್ತು ಒಡವೆಗಳನ್ನು ತೋರ್ಪಡಿಸುವಂತೆ ಹಾಕಿಕೊಂಡು ಓಡಾಡಬಾರದು. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಕ್ ಮಾಡುವವರು ಒಡವೆಗಳನ್ನು  ಹಾಕಿಕೊಂಡು ಹೋಗಬಾರದು. ಮನೆಯಿಂದ ಬೇರೆ  ಗ್ರಾಮಗಳಿಗೆ ಹೋಗುವ ಸಂದರ್ಭದಲ್ಲಿ ಮನೆಯಲ್ಲಿ ಯಾರನ್ನಾದರೂ ಮಲಗುವುದಕ್ಕೆ ಹೇಳಬೇಕು ಎಂದರು.
ಒಂಟಿ ಮನೆಯವರು ಸೂಕ್ತ ಭದ್ರತೆ ಯನ್ನು ಕಲ್ಪಿಸಿಕೊಳ್ಳಬೇಕು. ಮತ್ತು ಕಾನೂನುಬಾಹಿರವಾಗಿ ನಡೆಯುವ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement