ಸ್ವಾವಲಂಬಿ ಬದುಕಿಗಾಗಿ ಸಹಕಾರ ಸಂಘ ಸ್ಥಾಪಿಸಿ
ಹಾಸನ: ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಸಹಕಾರ ಸಂಘದ ಸ್ಥಾಪನೆ ಮಾಡಿ ಪ್ರಾಮಾಣಿಕವಾಗಿ ದುಡಿದಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದು ಸಿಎಂಎಸ್ಎಸ್ ಸೇವಾ ಸಂಸ್ಥೆ ನಿರ್ದೇಶಕ ಫಾದರ್ ಮಾರ್ಸೆಲ್ ಪಿಂಟೊ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮರಿಯ ನಗರದ ಚರ್ಚ್ ಸಮುದಾಯ ಭವನದಲ್ಲಿ ಬೆಂಗಳೂರಿನ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಹಾಗೂ ಹಾಸನ ಚಿಕ್ಕ ಮಗಳೂರು ಮಲ್ಟಿಪರ್ಪರ್ಸ್ ಸೋಷಿಯಲ್ ಸರ್ವಿಸ್ ಸೊಸೈಟಿ ನೇತೃತ್ವದಲ್ಲಿ ಕೇಂದ್ರ ರ್ಸೃರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ರಾಜ್ಯ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಪ್ರಾಯೋಜಕತ್ವದ ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಬೆಂಬಲ ಕಾರ್ಯಕ್ರಮ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಸಂಯೋಜಕ ವಿನ್ಸಿ ಸಿಕ್ವೇರಾ ಮಾತನಾಡಿದರು.