ಅರಸೀಕೆರೆ ತಾಲೂಕು ದೈಹಿಕ ಶಿಕ್ಷಕರ ಸಂಘಕ್ಕೆ ಆಯ್ಕೆ
ಅರಸೀಕೆರೆ: ತಾಲೂಕು ದೈಹಿಕ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಕೋಡಿಮಠ ವಿದ್ಯಾಸಂಸ್ಥೆಯ ಬಸವೇಶ್ವರ ಶಾಲೆ ಶಿಕ್ಷಕ ಸೂಳೆಕೆರೆ ಪ್ರಸನ್ನಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಚಿಕ್ಕೂರಿನ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಶಶಿಧರ್, ಉಪಾಧ್ಯಕ್ಷರಾಗಿ ಅರಕೆರೆ ಪ್ರೌಢಶಾಲೆಯ ಮಹಾಲಿಂಗಪ್ಪ ಹಾಗೂ ಖಜಾಂಚಿಯಾಗಿ ಶ್ಯಾನೆಗೆರೆ ಕಾಲಭೈರವೇಶ್ವರ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಸ್.ಬಿ.ನಾಗರಾಜ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.