ಗ್ರಾಮಸ್ಥರ ಘರ್ಷಣೆಗೆ ಜಿಲ್ಲಾಡಳಿತ ಹೊಣೆ
ಹಾಸನ: ಕುಡಿಯುವ ನೀರಿನ ಪೈಪ್ ಅಳವಡಿಕೆ ಸಂಬಂಧ ಶುಕ್ರವಾರ ಬೇಲೂರು ತಾಲೂಕಿನ ಮಾಳೇನಹಳ್ಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಸುತ್ತಮುತ್ತಲ ಗ್ರಾಮಸ್ಥರ ನಡುವೆ ನಡೆದಿರುವ ಘರ್ಷಣೆಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ ಕುಮಾರ್ ಆರೋಪಿಸಿದ್ದಾರೆ.
ಎರಡು ಊರುಗಳ ರೈತರ ಮತ್ತು ಗ್ರಾಮಸ್ಥರ ಬೇಡಿಕೆಗಳೂ ನ್ಯಾಯಸಮ್ಮತವಾಗಿರುವಾಗ ಮತ್ತು ಇಂತಹ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಲಕ್ಷಣಗಳು ಇದ್ದಾಗಿಯೂ ಜಿಲ್ಲಾ ಮತ್ತು ತಾಲೂಕು ಆಡಳಿತ, ಪೋಲೀಸ್ ಇಲಾಖೆ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಳ್ಳದಿರುವುದು ಇಷ್ಟಲ್ಲ ಅನಾಹುತಕ್ಕೆ ಕಾರಣವಾಗಿದೆ. ಇದು ಆಡಳಿತದ ವೈಫಲ್ಯ ಎಂದು ಖಂಡಿಸಿದ್ದಾರೆ.
ನೀರು, ರಸ್ತೆಗಳಿಗೆ ಸಂಭಂದಿಸಿದಂತೆ ಎರಡು ಜಿಲ್ಲೆಗಳ ನಡುವೆ ಇರುವ ಈ ವ್ಯಾಜ್ಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಮತ್ತು ಯಾವ ರೈತರಿಗೂ ಅನ್ಯಾಯವಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂ ಒತ್ತಾಯಿಸಿದ್ದಾರೆ