ಪತಂಜಲಿ ಯೋಗಾಸನ ಉಚಿತ ಶಿಬಿರ 10ರಿಂದ
ಹಾಸನ: ನಗರದ ಪತಂಜಲಿ ಯೋಗಾಕೇಂದ್ರ ಹಾಗೂ ಹೋಲಿ ಮದರ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜು. 10 ರಿಂದ 29 ರವರೆಗೆ ಮಹಿಳೆಯರಿಗಾಗಿ ಉಚಿತ ಯೋಗಾಸನ ಶಿಬಿರವನ್ನು ನಗರದ ಹೋಲಿ ಮದರ್ ಶಾಲೆಯ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ. ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವ ಹಾಗೂ ಮಹಿಳೆಯರ ದೈಹಿಕ ಮತ್ತು ಮಾನಸಿಕ ಅನೇಕ ಆರೋಗ್ಯ ಸಮಸ್ಯೆಗೆ (ಶಾಶ್ವತ) ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಮಹಿಳೆಯರ ರಕ್ತದ ಒತ್ತಡ, ಋತುಚಕ್ರ, ಮಧುಮೇಹ, ಥೈರಾಡ್, ಕೀಲು ನೋವು, ಮಾನಸಿಕ ಒತ್ತಡ, ಬೊಜ್ಜು ನಿವಾರಣೆ, ಸೈನ (ತಲೆನೋವು) ಇತರೆ ಸಮಸ್ಯೆಗಳಿಗೆ ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹು ದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 98443856 32ಅಥವಾ ದೂ.ಸಂ. 08172- 245343 ಸಂಪರ್ಕಿಸಲು ಕೋರಲಾಗಿದೆ.