ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಅಧ್ಯಕ್ಷ ಗಾದಿ ಠೇವಣಿ ಹೇಳಿಕೆಗೆ ವ್ಯಾಪಕ ಟೀಕೆ

Rashmi Kasaragodu
Updated On : 6 Jul 2014, 12:20 pm

ಕನ್ನಡಪ್ರಭ ವಾರ್ತೆ  ಸಕಲೇಶಪುರ  ಜು. 5
ಮುಂದಿನ ಪುರಸಭೆ ಅಧ್ಯಕ್ಷ ಗಾದಿಗಾಗಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಭದ್ರತೆ ಠೇವಣಿ ಇಟ್ಟಿದ್ದಾರೆಂಬ ಕಾಂಗ್ರೆಸ್ ಮುಖಂಡರ ಬಹಿರಂಗ  ಹೇಳಿಕೆಯ ಬಗ್ಗೆ ಪಟ್ಟಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
 23 ಸದಸ್ಯ ಬಲದ ಪುರಸಭೆಯಲ್ಲಿ 13 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಸರಳ ಬಹುಮತದೊಂದಿಗೆ ಕಳೆದ 10 ತಿಂಗಳಿನಿಂದ ಆಡಳಿತ ಚುಕ್ಕಾಣಿ ಹಿಡಿದಿತ್ತು. ಆದರೆ ಅಧ್ಯಕ್ಷರಾದ ವ್ಯಕ್ತಿ ಪುರಸಭ ಸದಸ್ಯರ ವಿಶ್ವಾಸಕ್ಕೆ ಪಾತ್ರರಾಗಲಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್ ಸದಸ್ಯರ ಸಹಕಾರದಿಂದೊಂದಿಗೆ ಕಳೆದ 3 ರಂದು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅಧಿಕಾರದಿಂದ ಪದಚ್ಯುತಿಗೊಳಿಸಿದ್ದರು.
ಕಾಂಗ್ರೆಸ್ ಹೊಸ ಷರತ್ತು: ಇದರಿಂದಾಗಿ ಅಲ್ಪಮತಕ್ಕೆ ಕುಸಿದಿರುವ ಜೆಡಿಎಸ್ ಮುಂದಿನ 40 ತಿಂಗಳ ಆಡಳಿತ ನಡೆಸಲು ವಿರೋಧ ಪಕ್ಷದ ಸದಸ್ಯರ ಬೆಂಬಲ ಗಳಿಸಬೇಕಿದೆ. ಇದಕ್ಕಾಗಿ ಬೆಂಬಲ ನೀಡಲು ಮುಂದೆ ಬಂದಿರುವ ಕಾಂಗ್ರೆಸ್ ಸದಸ್ಯರು ಹೊಸ ಷರತ್ತು ವಿಧಿಸಿದ್ದು, ಕೊನೆಯ 10 ತಿಂಗಳ ಅಧ್ಯಕ್ಷಸ್ಥಾನವನ್ನು ಕಾಂಗ್ರೆಸ್ಗೆ ನೀಡಬೇಕು ಎಂಬ ಮಾತುಕತೆ ನಡೆಸಿದೆ.
 ಜೆಡಿಎಸ್ ಪಕ್ಷ ಪುರಸಭೆ ಆಡಳಿತವನ್ನು ಕಾಂಗ್ರೆಸ್ಗೆ ಹಸ್ತಾಂತರಿಸುವವರೆಗೆ 30 ಲಕ್ಷ ರು.ಗಳನ್ನು ಮುಂದಿನ 30 ತಿಂಗಳ ಕಾಲ ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಭದ್ರತಾ ಠೇವಣಿ ಇಟ್ಟಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸದಸ್ಯರ ಸಮ್ಮುಖದಲ್ಲೆ ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಶಭಿರ್ ಖಾನ್ ಹೇಳಿಕೆ ನೀಡಿದ್ದರು.  ಈ  ಹೇಳಿಕೆ ಈಗ ಪಟ್ಟಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಣವಿದ್ದವರು ಮಾತ್ರವೆ ಪುರಸಭೆ ಅಧ್ಯಕ್ಷರಾಗುವಂತಹ ಕೆಟ್ಟ ಪರಿಸ್ಥಿತಿಯನ್ನು ಹುಟ್ಟು ಹಾಕಲಾಗುತ್ತಿದೆ. ಇದರಿಂದಾಗಿ ನಿಜವಾಗಿ ಅಧ್ಯಕ್ಷರಾಗುವ ಅರ್ಹತೆ ಇರುವ ಸದಸ್ಯರಿಗೆ ಅನ್ಯಾಯವಾಗುವುದು ನಿಶ್ಚಿತವಾಗಿದ್ದು, ಪ್ರಜಾಪ್ರಭುತ್ವವವನ್ನು ಹಣವಿದ್ದವರು ಕೊಳ್ಳಲು ಹೊರಟ್ಟಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿದ್ದರೆ, ಇದಲ್ಲದೆ ಪಟ್ಟಣದ 23 ಸಾವಿರ ಜನರ ಭಾವನೆಯನ್ನು ಹಣವಿರುವ ಕೆಲವೆ ಮಂದಿ ಅಡವಿಡಲು ಹೊರಟ್ಟಿದ್ದು ಇದು ಪಟ್ಟಣದ ಜನರಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.  


 ಪುರಸಭೆ ಅಧ್ಯಕ್ಷಗಾದಿಗೆರಲು ಹಣ ಭದ್ರತೆ ಇಡುವ ಕುರಿತು ಬಹಿರಂಗ ಹೇಳಿಕೆ ನೀಡಿರುವ ಮುಖಂಡರು ಹಣವಿದ್ದರೆ ಪಟ್ಟಣವನ್ನೆ ಕೊಳ್ಳಬಹುದು ಎಂಬ ಮನೋಭಾವನೆ ಹೊಂದಿದಂತಿದೆ. ಈ ಬಹಿರಂಗ ಹೇಳಿಕೆಯನ್ನು ಕೇಳಿಯು ಜಿಲ್ಲಾಡಳಿತ ಸುಮ್ಮನಿರುವುದು ಬೇಸರ. ಈ ಕೊಡಲೇ ಪುರಸಭೆಯನ್ನು ಸೋಪರ್ಸೀಡ್ ಮಾಡಬೇಕು.
 ಮಾಗೇರಿ ಸುರೇಶ್  ಗೌಡ, ಕರವೇ ತಾಲೂಕು ಅಧ್ಯಕ್ಷ


ಪುರಸಭಾ ಸದಸ್ಯರ ಸಮ್ಮುಖದಲ್ಲೆ ಪುರಸಭೆ ಅಧ್ಯಕ್ಷರಾಗುವ ವ್ಯಕ್ತಿ ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಹಣವನ್ನು ಭದ್ರತೆಯಾಗಿ ಇಡಲಾಗಿದೆ ಎಂಬ ಹೇಳಿಕೆ ಆಧರಿಸಿ ಪುರಸಭೆ ಸೂಪರ್ಸೀಡ್ ಮಾಡಬೇಕು.
 ಕ್ಯಾಮನಹಳ್ಳಿ ರಾಜ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ


ಪಟ್ಟಣದ ಅಭಿವೃದ್ದಿಯನ್ನು ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಸದಸ್ಯರನ್ನು ಗೆಲ್ಲಿಸಿರುವ ನಮಗೆ ಇವರ ವರ್ತನೆ ಹೇಸಿಗೆ ಹುಟ್ಟಿಸುತ್ತಿದೆ.
 ಮೋಹಿಸಿನ್
 ಕಾಂಗ್ರೆಸ್ ವಕ್ತಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement