ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಡತನದ ಹೆಚ್ಚಳಕ್ಕೆ ಅಜ್ಞಾನವೇ ಕಾರಣ

Rashmi Kasaragodu
Updated On : 6 Jul 2014, 12:12 pm

ಹಾಸನ: ಬಡತನ ನಿವಾರಣೆಗೆ ಭಾರತದ ಯಾವ ವ್ಯವಸ್ಥೆಯೂ ಕೂಡ ನೈಜ ಕಾಳಜಿಯನ್ನು ಹೊಂದಿಲ್ಲ. ಈ ಜನರ ಮುಗ್ಧ ಮೂಢನಂಬಿಕೆಯನ್ನು ಬಳಸಿಕೊಂಡು ಉಳ್ಳವರು ರಾಜಕೀಯ ಪ್ರಾಬಲ್ಯ ಬೆಳೆಸಿಕೊಳ್ಳುತ್ತಿದ್ದಾರೆಯೇ ಹೊರತು ಜನಸಾಮಾನ್ಯರ ಸಾಮಾಜಿಕ ಬದುಕಿಗೆ ಸ್ಪಂದಿಸುತ್ತಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ತಾಲೂಕು ಅಧ್ಯಕ್ಷೆ ಮಮತ ಶಿವು ಹೇಳಿದರು.  
  ಇತ್ತೀಚೆಗೆ ನಗರದ ರಾಜಕುಮಾರ ನಗರದಲ್ಲಿ ಅಲ್ಲಿನ ನೂತನ ಬಿಜಿವಿಎಸ್ ಘಟಕದ ಮೊದಲ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 15 ಜನರ ಸಮಿತಿಯನ್ನು ಪುನರ್ ರಚಿಸಲಾಯಿತು, ಅಧಕ್ಷೆಯಾಗಿ  ಭಾಗ್ಯ, ಉಪಾಧ್ಯಕ್ಷೆಯಾಗಿ  ಸುಶೀಲಮ್ಮ, ಕಾರ್ಯದರ್ಶಿಯಾಗಿ  ವಿಮಲ ಸಹ-ಕಾರ್ಯದರ್ಶಿಯಾಗಿ ಸುಮಿತ್ರಮ್ಮ, ಖಜಾಂಚಿಯಾಗಿ ಲಲಿತ ಹಾಗೂ ಸದಸ್ಯರಾಗಿ ಶಾರದ, ಶಿವಮ್ಮ, ಇಂದ್ರ, ಭಾಗ್ಯಮ್ಮ, ವೀಣ, ಸುಧಾ, ಆಶಾ, ಜಯಂತಿ, ರಾಧಾ ಮತ್ತು ಮಣಿ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement