ಮಣ್ಣಿನ ಫಲವತ್ತತೆ ರಕ್ಷಣೆಗೆ ಸಾವಯವ ಕೃಷಿ ಅಗತ್ಯ
ಹಾಸನ: ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ, ಸಮಸ್ಯಾತ್ಮಕ ಮಣ್ಣುಗಳು ಮತ್ತು ಅದರ ನಿರ್ವಹಣೆ ಬಗ್ಗೆ ಇತ್ತೀಚೆಗೆ ಎರಡು ದಿನಗಳ ತರಬೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮಂಡ್ಯ ಕೃಷಿ ಕಾಲೇಜು ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀನಿವಾಸ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮಣ್ಣಿನ ಗುಣಮಟ್ಟದಲ್ಲಿ ಸಾವಯವ ಇಂಗಾಲದ ಅಂಶ ಕಡಿಮೆ ಇದ್ದು, ಸಾವಯವ ಪದಾರ್ಥಗಳನ್ನು ಮಣ್ಣಿಗೆ ಹಾಕಿ ಮಣ್ಣಿನ ಫಲವತ್ತತೆ ರಕ್ಷಿಸಬೇಕು ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನಿ ಡಾ.ಎಸ್.ಚೆನ್ನಕೇಶವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಎಂ. ಶಿವಶಂಕರ್, ಡಾ.ಟಿ.ಎಸ್.ಮಂಜುನಾಥಸ್ವಾಮಿ, ಡಾ. ಹೆಚ್. ಕೆ. ಪಂಕಜಾ ಮತ್ತು ಡಾ.ಎ.ಸಿ ಗಿರೀಶ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.