ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಾನ್ಯತೆ ಪಡೆಯದ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ

Rashmi Kasaragodu
Updated On : 6 Jul 2014, 12:15 pm

ಹಾಸನ: ಶಾಲೆಯ ಸಮೀಪದಲ್ಲೇ ಅನುಮತಿ ಇಲ್ಲದೆ ಇನ್ನೊಂದು ಶಾಲೆ ತೆರೆದಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಡಿಪಿಐಗೆ ಷಾ ಖಲಂದರ್ ಎಜುಕೇಶನ್ ಸೊಸೈಟಿಯಿಂದ ಡಿಡಿಪಿಐಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.  ಅರಸೀಕೆರೆ ತಾಲೂಕು ಜಾವಗಲ್ನಲ್ಲಿ ಷಾ ಖಲಂದರ್ ಎಜುಕೇಶನ್ ಸೊಸೈಟಿ ಇವರ ಅಡಿಯಲ್ಲಿ ಶಾಲೆ ಪ್ರಾರಂಭವಾಗಿ ಎರಡು ವರ್ಷಗಳಾಗಿದೆ. ಸರ್ಕಾರಿ ನಿಯಮದಂತೆ ಒಂದು ಶಾಲೆ ಮತ್ತೊಂದು ಶಾಲೆ ಮಧ್ಯೆ ಕನಿಷ್ಠ ಒಂದು ಕಿಮಿ ದೂರದಲ್ಲಿ ಇರಬೇಕು. ಆದರೆ ಧನ್ಯ ಪಬ್ಲಿಕ್ ಶಾಲೆಯನ್ನು ಅನುಮತಿ ಪಡೆಯದೆ ತೆರೆಯಲಾಗಿದೆ ಎಂದು ದೂರಿದರು.   ಇದರಿಂದ ನಮ್ಮ ಶಾಲೆಯ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಪೋಷಕರುಗಳಿಗೆ ನಮ್ಮ ಶಾಲೆಯ ಬಗ್ಗೆ ತಪ್ಪು ಮಾಹಿತಿ ನೀಡಿ ಮಕ್ಕಳನ್ನು ಇತರೆ ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.  ಇದೇ ವೇಳೆ ರೈತ ಸಂಘದ ಡಿ.ಕೆ. ನಿಂಗೇಗೌಡ, ಮುಸ್ಲಿಂ ಮುಖಂಡ ಸಮೀರ್ ಅಹಮದ್, ವಕೀಲರಾದ ಎನ್.ಎಸ್. ಗೋಪಾಲ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement