ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಗ್ರಿ ಉಚಿತ ವಿತರಣೆ
ಆಲೂರು: ತಾಲೂಕಿನ ರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಇಸ್ಕಾನ್ ಸಂಸ್ಥೆಯ ವೈಕುಂಠ ಗೌರವದಾಸ ದಂಪತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸುಮಾರು 10 ಸಾವಿರ ರು. ಮೌಲ್ಯದ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬಿಆರ್. ರವಿ ಪ್ರಕಾಶ್, ಮುಖ್ಯ ಶಿಕ್ಷಕ ರಾಮ ಚಂದ್ರಮೂರ್ತಿ, ಸಿಆರ್ಪಿ ಶಿವಣ್ಣ, ರಾಜಶೇಖರ ಹಾಗೂ ಶಾಲಾ ಸಿಬ್ಬಂದಿ ಇದ್ದರು.