ಕಾಡು ಹಂದಿಗಳಿಂದ ಶುಂಠಿ ಬೆಳೆ ನಾಶ
ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದ ಹುಲಿಗೌಡ ಎಂಬುವರ ಜಮೀನಿನಲ್ಲಿ ಉತ್ತಮವಾಗಿ ಬೆಳೆದು ನಿಂತ ಶುಂಠಿ ಬೆಳೆಯನ್ನು ಕಾಡು ಹಂದಿಗಳು ನಾಶ ಮಾಡಿದ ಪರಿಣಾಮ ರೈತ ಕಂಗಾಲಾಗಿದ್ದಾನೆ. ಈ ಬಗ್ಗೆ ರೈತ ಸಂಘದ ಕಲ್ಲಹಳ್ಳಿ ಅಣ್ಣೇಗೌಡ ಮಾತನಾಡಿ, ಇತ್ತೀಚಿನ ದಿನದಲ್ಲಿ ರೈತರು ಮಳೆ ಇಲ್ಲದೆ ಪರದಾಡುತ್ತಿದ್ದು, ವಿದ್ಯುತ್ ಸಮಸ್ಯೆ ನಡುವೆ ಬೆಳೆದ ಶುಂಠಿ-ಜೋಳ ಕಬ್ಬು ಮುಂತಾದ ಬೆಳೆಗಳನ್ನು ಕಾಡುಹಂದಿಗಳು ನಾಶ ಮಾಡಿವೆ. ಸರ್ಕಾರ ಹಂದಿಗಳನ್ನು ಓಡಿಸಲು ನಿರ್ಧಾರ ಮಾಡಬೇಕು, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಮುರ್ತಣ್ಣ, ಚಂದ್ರಣ್ಣ, ರಘು ಇದ್ದರು.